Breaking News

ತಾಯಿಯೊಬ್ಬಳು ತನ್ನ ಮಗನನ್ನೇ ಕೊಂದ ಘಟನೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿತ್ತು. ಇದೀಗ ಅಪರಾಧಿಗೆ ಚಿಕ್ಕೋಡಿ ಕೋರ್ಟ್‌ ದಂಡಸಹಿತ ಜೈಲುಶಿಕ್ಷೆ ವಿಧಿಸಿದೆ.

Spread the love

ಚಿಕ್ಕೋಡಿ (ಬೆಳಗಾವಿ) : ತನ್ನ ಅನೈತಿಕ ಸಂಬಂಧ ಗೊತ್ತಾಯಿತು ಎಂದು ಮಗನನ್ನು ಬಾವಿಗೆ ತಳ್ಳಿ ಕೊಲೆಗೈದ ಮಹಿಳೆಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 7 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ ಕರಿಗಾರ (31) ಶಿಕ್ಷೆಗೊಳಗಾದವರು. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (22/10/2019ರಲ್ಲಿ) ನಡೆದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ನಡೆಸಿದರು.

ಘಟನೆಯ ವಿವರ: ಪರಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿರುವುದು ಹಿರಿಯ ಮಗ ಪ್ರವೀಣ್(10) ಗೊತ್ತಾಗಿದೆ. ಈ ವಿಷಯವನ್ನು ತಂದೆಗೆ ಹೇಳುತ್ತೇನೆ ಎಂದು ಆತ ಓಡಿ ಹೋದಾಗ ಆತನನ್ನು ಕರೆದು 50 ರೂ. ಕೊಟ್ಟು ಅಂಗಡಿಯಲ್ಲಿ ತಿನಿಸು ತರಲು ಇನ್ನೊಬ್ಬ ಕಿರಿಯ ಮಗ ಪ್ರಜ್ವಲ್‌ನನ್ನೂ (8) ಜೊತೆಗೆ ಕಳುಹಿಸಿದ್ದಳು. ಇದೇ ವೇಳೆ ಮಕ್ಕಳ ಹಿಂದಿನಿಂದಲೇ ಹೋಗಿದ್ದ ಮಹಿಳೆ ಬೆಲ್ಲದ ಬಾಗೇವಾಡಿ ಉದಯಕುಮಾರ ಮಲ್ಲಿನಾಥ ಪಾಟೀಲ ಎಂಬವರ ಜಮೀನಿನಲ್ಲಿರುವ ಬಾವಿಗೆ ಪ್ರವೀಣ್‌ನನ್ನು ತಳ್ಳಿದ್ದಾಳೆ. ಅಲ್ಲೇ ಇದ್ದ ಪ್ರಜ್ವಲ್‌ಗೆ ನೀನು ಯಾರ ಮುಂದಾದರೂ ಕೊಲೆ ವಿಷಯ ಹೇಳಿದರೆ ನಿನ್ನನ್ನೂ ಸಹ ಹೀಗೇ ಸಾಯಿಸಿಬಿಡುತ್ತೇನೆ ಎಂದು ಜೀವಬೆದರಿಕೆ ಹಾಕಿದ್ದಳು. ಘಟನೆಯ ನಂತರ ಮಗ ಬಾವಿಗೆ ಬಿದ್ದು ತೀರಿಕೊಂಡ ಎಂದು ಸುಧಾ ಸುರೇಶ ಕರಿಗಾರ ನಾಟಕವಾಡಿದ್ದಳು. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ