Breaking News

ಕಾರ್ಮಿಕರಿಲ್ಲದೆ ಲಂಗರು ಹಾಕಿದ ಬೋಟ್​ಗಳು; ಉತ್ತಮ ವಾತಾವರಣವಿದ್ದರೂ ಶುರುವಾಗದ ಮೀನುಗಾರಿಕೆ!

Spread the love

ಕಾರವಾರ (ಉತ್ತರಕನ್ನಡ) : ಉತ್ತಮ ವಾತಾವರಣ ಇರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಹೊರರಾಜ್ಯದ ಮೀನುಗಾರರನ್ನು ನಂಬಿದ್ದ ಬೋಟ್‌ಗಳಿಗೆ ಎರಡು ವಾರ ಕಳೆದರೂ ಕಾರ್ಮಿಕರು ಬಾರದೇ ಇರುವುದು ಬೋಟ್‌ಗಳು ಬಂದರುಗಳಲ್ಲಿಯೇ ಲಂಗರು ಹಾಕಿವೆ.

ಜಿಲ್ಲೆಯ ಬಹುತೇಕ ಮೀನುಗಾರಿಕಾ ಬೋಟುಗಳು ಒಡಿಶಾ, ಜಾರ್ಖಂಡ್, ಉತ್ತರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯದ ಕಾರ್ಮಿಕರನ್ನೇ ಹೆಚ್ಚಾಗಿ ನಂಬಿಕೊಂಡಿವೆ. ಈ ಕಾರ್ಮಿಕರ ಮೂಲಕವೇ ವರ್ಷವಿಡೀ ಮೀನುಗಾರಿಕೆ ನಡೆಯುತ್ತದೆ. ಆದರೆ ಈಗ ಮೀನುಗಾರಿಕೆ ಪ್ರಾರಂಭವಾಗಿ ಎರಡು ವಾರ ಸಮೀಪಿಸಿದರೂ ಕಾರ್ಮಿಕರು ಆಗಮಿಸಿಲ್ಲ. ಬೋಟ್​ ಮಾಲೀಕರು ಕಾರ್ಮಿಕರನ್ನು ಫೋನ್​ ಮೂಲಕ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಲಭಿಸದೇ ಇರುವುದು ಬೋಟ್‌ಗಳು ಲಂಗರು ಹಾಕಲು ಕಾರಣವಾಗಿದೆ.

ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುವ ತಲಾ ಒಂದು ಬೋಟುಗಳಿಗೆ ಸುಮಾರು 30ರಿಂದ 35 ಕಾರ್ಮಿಕರ ಅಗತ್ಯವಿದೆ. ಈ ಪರ್ಸಿನ್ ಬೋಟುಗಳು ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದರೆ ವಾಪಸಾಗಲು 5 ದಿನಗಳು ಬೇಕು. ಈ ಬೋಟುಗಳಿಗೆ ಹೆಚ್ಚಿನ ಕಾರ್ಮಿಕರು ಬೇಕು. ಟ್ರಾಲರ್ ಬೋಟುಗಳು ನಿತ್ಯ ಮೀನುಗಾರಿಕೆ ಮಾಡುವ ಬೋಟ್​ಗಳಾಗಿದ್ದು 10 ಕಾರ್ಮಿಕರಿದ್ದರೆ ಸಾಕು. ಕಾರ್ಮಿಕರೆಲ್ಲ ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಇನ್ನಿತರ ರಾಜ್ಯದವರಾಗಿದ್ದು ಈವರೆಗೆ ಶೇ.10ರಷ್ಟು ಕಾರ್ಮಿಕರು ಮರಳದೇ ಇರುವುದು ಜಿಲ್ಲೆಯ ಅನೇಕ ಬೋಟುಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿದೆ.

“ಜಾರ್ಖಂಡ್ ಸೇರಿದಂತೆ ಆಯಾ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕಾರ್ಮಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮಾಹಿತಿ ಇದೆ. ಹೀಗಾಗಿ ಅಲ್ಲಿನ ಕಾರ್ಮಿಕರು ಬೋಟ್​​ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಜೊತೆಗೆ ಕೆಲವು ಕಾರ್ಮಿಕರು ಉಡುಪಿ, ಗೋವಾ ಕಡೆ ಕೆಲಸ ಅರಸಿ ತೆರಳುತ್ತಿದ್ದಾರೆ. ಇದರಿಂದ ಮೀನುಗಾರಿಕೆಗೆ ಸಾಕಷ್ಟು ತೊಂದರೆಯಾಗುತ್ತಿದೆ” ಎನ್ನುತ್ತಾರೆ ಬೋಟ್ ಮಾಲೀಕ ನಿತಿನ್ ಗಾಂವಕರ್.

ಪ್ರತಿ ವರ್ಷ ಆಗಸ್ಟ್​ 1ರಿಂದ ಮಳೆಗಾಲ ಆರಂಭವಾದರೂ ಭಾರಿ ಮಳೆ, ಗಾಳಿ, ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಸಾಮಾನ್ಯವಾಗಿರುತ್ತಿತ್ತು. ಇದರಿಂದ ಮೀನುಗಾರಿಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈ ಅವಧಿಯಲ್ಲೂ ಮೀನುಗಾರಿಕೆ ಸಾಧ್ಯವಾಗದೇ ನಷ್ಟ ಅನುಭವಿಸುವಂತಾಗುತ್ತಿತ್ತು. ಆದರೆ ಈ ವರ್ಷ ಮಳೆ-ಗಾಳಿಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಮೀನುಗಾರಿಕೆಗೆ ಉತ್ತಮ ವಾತಾವರಣವೂ ಇದೆ.


Spread the love

About Laxminews 24x7

Check Also

ಹೈಡ್ರಾಲಿಕ್ ಎಲಿವೇಟರ್​ಗೆ ಸಿಲುಕಿ ಯುವಕ ಸಾವು

Spread the loveಬೆಂಗಳೂರು, ಸೆಪ್ಟೆಂಬರ್​ 03: ಶಾರ್ಟ್​ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ (fire) ಹೊತ್ತಿಕೊಂಡು ಮಗು ಸಾವನ್ನಪ್ಪಿರುವಂತಹ (death) ಘಟನೆ ನಗರದ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ