Home / ರಾಜಕೀಯ / ಖುದ್ದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಫಿಲ್ಡಿಗಿಳಿಯುವ ಮೂಲಕ ಕಸ ವಿಲೇವಾರಿ‌ ಪರಿಶೀಲನೆ

ಖುದ್ದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಫಿಲ್ಡಿಗಿಳಿಯುವ ಮೂಲಕ ಕಸ ವಿಲೇವಾರಿ‌ ಪರಿಶೀಲನೆ

Spread the love

ಬೆಳಗಾವಿ : ನಗರದ ಕೆಲವು ವಾರ್ಡ್​ಗಳಿಗೆ ಕಸ ಸಂಗ್ರಹಿಸುವ ವಾಹನಗಳು ಹೋಗುತ್ತಿರಲಿಲ್ಲ.

ಕೆಲವು ಕಡೆಗಳಲ್ಲಿ ಸರಿಯಾದ ಸಮಯಕ್ಕೆ ವಾಹನ ತೆರಳುತ್ತಿಲ್ಲವೆಂದು ಆಯುಕ್ತರಿಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತುಕೊಂಡ ಆಯುಕ್ತ ಅಶೋಕ ದುಡಗುಂಟಿ ಸೋಮವಾರ ಬೆಳಗ್ಗೆ 5.30ಕ್ಕೆ ಸೈಕಲ್ ಮೇಲೆ ಕಸ ಸಂಗ್ರಹಿಸುವ ವಾಹನಗಳ ಶಾಖೆಗೆ ದಿಢೀರ್ ಭೇಟಿ ನೀಡಿದ್ದರು.

ಈ ವೇಳೆ ಚಾಲಕರು, ಕ್ಲೀನರ್ ಗಳು ಎಷ್ಟು ಗಂಟೆಗೆ ಡ್ಯೂಟಿಗೆ ಬರುತ್ತಾರೆ ಎಂದು ಹಾಜರಿ ಪುಸ್ತಕ ಪರೀಕ್ಷಿಸಿದರು. ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಕೆಲ ಪೌರ ಕಾರ್ಮಿಕರನ್ನು ಆಯುಕ್ತರು ತರಾಟೆಗೆ ತೆಗೆದುಕೊಂಡರು. ನಾಳೆಯಿಂದ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಬರಬೇಕು. ತಮಗೆ ನಿಗದಿ ಪಡಿಸಿದ ವಾರ್ಡ್​ಗಳಿಗೆ ತೆರಳಿ ಕಸ ಸಂಗ್ರಹಿಸುವಂತೆ ಖಡಕ್ ಸೂಚನೆ ನೀಡಿದರು. ಅಲ್ಲದೇ ಕಸ ವಿಲೇವಾರಿ ವಾಹನದಲ್ಲಿಯೇ ಸಿಟಿ ರೌಂಡ್ ಹಾಕಿದರು.

ವಾರ್ಡ್ 43ರಲ್ಲಿ ಸ್ಥಳೀಯರ ಸಮಸ್ಯೆ ಆಲಿಸಿದ ಆಯುಕ್ತರಿಗೆ ಮಹಾನಗರ ಪಾಲಿಕೆ ಸದಸ್ಯೆ ವಾಣಿ ವಿಲಾಸ್ ಜೋಶಿ ಅವರು ಕೂಡ ಸಾಥ್ ಕೊಟ್ಟು, ಇಲ್ಲಿನ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದರು. ನಾಲಾಗಳಲ್ಲಿ ಕಸ ತುಂಬಿಕೊಂಡಿದ್ದು, ಅದನ್ನು ಕೂಡಲೇ ಸ್ವಚ್ಛಗೊಳಿಸಬೇಕು. ಸ್ಮಶಾನಗಳಲ್ಲಿ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಸೇರಿದಂತೆ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು. ಒಟ್ಟಿನಲ್ಲಿ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅಶೋಕ ದುಡಗುಂಟಿ ಬೆಳಗ್ಗೆ ಖುದ್ದು ಸಿಟಿ ರೌಂಡ್ ಹಾಕಿ, ಜನರ ಸಮಸ್ಯೆ ನಿವಾರಣೆಗೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲಿ : ಬಿಬಿಎಂಪಿ ಹಾಗೂ ಕಸ ವಿಲೇವಾರಿ ಗುತ್ತಿಗೆದಾರರು ಪೌರಕಾರ್ಮಿಕರ ಭವಿಷ್ಯ ಹಾಗೂ ಆರೋಗ್ಯದೊಂದಿಗೆ ಚೆಲ್ಲಾಟವಾಡಿ ಸಂಚಕಾರ ತರುತ್ತಿದ್ದಾರೆ. 500 ಕೋಟಿಗಿಂತ ಹೆಚ್ಚು ಇಎಸ್​​ಐ ಪಿಎಫ್ ಹಣವನ್ನು ಭರಿಸದೇ ಪೌರಕಾರ್ಮಿಕರ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ಜುಲೈ 28 ರಂದು ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಆರೋಪಿಸಿದ್ದರು.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ