ಬೆಳಗಾವಿ ನಗರಕ್ಕೆ ನೀರು ಪೂರೈಸುವ ರಕಸಕೊಪ್ಪ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಕಾರ್ಪೊರೇಟರ್ ಶಂಕರ ಪಾಟೀಲ ಅವರ ನೇತೃತ್ವದಲ್ಲಿ ಗಣಾಚಾರಿ ಗಲ್ಲಿಯ ನಾಗರಿಕರ ವತಿಯಿಂದ ಇಂದು ಗಂಗಾಪೂಜೆ ಕಾರ್ಯಕ್ರಮ ನಡೆಯಿತು.
ಹೌದು, ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ನಗರದ ಕುಡಿಯುವ ನೀರಿನ ಮೂಲವಾದ ಜಲಾಶಯ ಇದೀಗ ಭರ್ತಿಯಾಗಿದೆ. ಹಾಗಾಗಿ ಸಂಪ್ರದಾಯದಂತೆ ಕಾರ್ಪೋರೇಟರ್ ಶಂಕರ ಪಾಟೀಲರವರ ನೇತೃತ್ವದಲ್ಲಿ ಗಣಾಚಾರಿ ಗಲ್ಲಿಯ ನಾಗರಿಕರ ವತಿಯಿಂದ ಇಂದು ಜಲಾಶಯ ಗಂಗಾಪೂಜೆ ಕಾರ್ಯಕ್ರಮ ನಡೆಯಿತು.ಸಾಂಪ್ರದಾಯಿಕ ಆಚರಣೆಗಳ ಪ್ರಕಾರ,
ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ಜಲರೂಪವಾದ ಗಂಗಾ ಮಾತೆಯ ಆಶೀರ್ವಾದವನ್ನು ಪಡೆಯಲು ಈಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಕಾರ್ಪೊರೇಟರ್ ಶಂಕರ ಪಾಟೀಲ ಜಲಾಶಯ ಧಾರ್ಮಿಕ ಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿದರು.
ಈ ಕುರಿತು ಇನ್ ನ್ಯೂಸ್ ಗೆ ಮಾಹಿತಿ ನೀಡಿದ ಕಾರ್ಪೊರೇಟರ್ ಶಂಕರ ಪಾಟೀಲ, ರಕಸಕೊಪ್ಪ ಜಲಾಶಯ ತುಂಬಿದ ನಂತರ ಪ್ರತಿ ವರ್ಷ ಗಂಗಾಪೂಜೆ ಮಾಡುವುದು ವಾಡಿಕೆ. ಅದರಂತೆ ಇಂದು ಗಣಾಚಾರಿ ಗಲ್ಲಿಯ ಹಿರಿಯರು ಹಾಗೂ ನಾಗರಿಕರು ಪಾಲ್ಗೊಂಡು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಯಿತು. ನದಿಯು ಸಮೃದ್ಧಿಯನ್ನು ತರುತ್ತದೆ, ಅಂದರೆ ಬೆಳಗಾವಿಯವರಿಗೆ ವರ್ಷವಿಡೀ ನಮಗೆ ಬೇಕಾದ ಎಲ್ಲಾ ನೀರನ್ನು ಪಡೆಯಬಹುದು ಎಂದರು