Breaking News

ಕಳೆದ 15 ದಿನಗಳಿಂದ ಉತ್ತಮ ಮಳೆ ಬಿತ್ತನೆ ಕಾರ್ಯ ಚುರುಕು

Spread the love

ಬೆಳಗಾವಿ: ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ರೈತರು ಭೂಮಿ ಹದಗೊಳಿಸುವಲ್ಲಿ ನಿರತರಾಗಿದ್ದಾರೆ.

. ಈ ಬಾರಿ ಮುಂಗಾರು ಮಳೆ ಎರಡು ತಿಂಗಳು ವಿಳಂಬವಾಗಿದ್ದರಿಂದ ಸವದತ್ತಿ ತಾಲೂಕಿನ ಕರಿಕಟ್ಟಿ ಸೇರಿ ಸುತ್ತಲಿನ ಹಲವಾರು ಗ್ರಾಮದ ರೈತರು ಬಿತ್ತನೆ ಮಾಡಿರಲಿಲ್ಲ. ಇತ್ತೀಚೆಗೆ ನಿರಂತರವಾಗಿ ಮಳೆಯಾಗಿದ್ದು, ಮಳೆರಾಯ ಈಗ ಒಂದಿಷ್ಟು ವಿರಾಮ ಕೊಟ್ಟಿದ್ದಾನೆ. ಹೀಗಾಗಿ ಬೀಜ, ಗೊಬ್ಬರ ತಂದು ಮನೆಯಲ್ಲಿ ಸಂಗ್ರಹ ಮಾಡಿದ್ದ ರೈತರು ಹತ್ತಿ, ಸೊಯಾಬಿನ್ ಇನ್ನಿತರ ಬೀಜ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಭೂಮಿ ಹದಗೊಳಿಸುತ್ತಿದ್ದ ಕರಿಕಟ್ಟಿ ಗ್ರಾಮದ ರೈತ ಬಾಬಾಜಾನ್ ಬಾವಾಖಾನ್ ಈಟಿವಿ ಭಾರತ ಜೊತೆಗೆ ಮಾತನಾಡಿ, ಮಳೆ ತಡವಾಗಿದ್ದರಿಂದ ನಮ್ಮೂರಲ್ಲಿ ಶೇ.10ರಷ್ಟು ಮಾತ್ರ ಭೂಮಿ ಬಿತ್ತನೆಯಾಗಿದೆ. ನಮ್ಮಲ್ಲಿ ಬಹುತೇಕ ಮಳೆಯರನ್ನು ನಂಬಿ ಕೃಷಿ ಮಾಡುತ್ತೇವೆ. ಈಗ ಮಳೆಯಾಗಿದ್ದರಿಂದ ಹತ್ತಿಕಾಳು, ಸೊಯಾಬಿನ್ ಬಿತ್ತನೆಗೆ ತಯಾರಿ ನಡೆಸಿದ್ದು, ಇನ್ನೇಲೆ ಅದು ಎಷ್ಟು ಬೆಳೆ ಬರುತ್ತದೆಯೋ ಗೊತ್ತಿಲ್ಲ. ಈಗ ಸದ್ಯ ಮಳೆಯನ್ನೂ ನಂಬಿ ಬಿತ್ತನೆ ಮಾಡುತ್ತಿದ್ದೇವೆ. ಆ ಭಗವಂತನೇ ಕಾಪಾಡಬೇಕು ಎಂದು ಹೇಳಿದರು.

ಇಲ್ಲಿ ಒಣ ಬೇಸಾಯ ಇದ್ದು, ಕರಿಕಟ್ಟಿ ಗ್ರಾಮದಲ್ಲಿ ಶೇ 98ರಷ್ಟು ಕೃಷಿ ಅವಲಂಬಿತರು ಇದ್ದಾರೆ. ಹಿಂದೆ ಬೆಳೆಹಾನಿ ನೀಡಿದಂತೆ ಹೆಕ್ಟೇರ್ ಮೇಲೆ ಸರ್ಕಾರ 5 ರಿಂದ 10 ಸಾವಿರ ಪರಿಹಾರ ಕೊಟ್ರ ರೈತ ಬದುಕುತ್ತಾನೆ. ಇಲ್ಲದಿದ್ದರೆ ಮತ್ತಷ್ಟು ಪರಿಸ್ಥಿತಿ ಕೆಡುತ್ತದೆ. ಕೇಂದ್ರ ಸರ್ಕಾರ ಬಿತ್ತನೆಗಾಗಿ ರೈತರಿಗೆ ಪರಿಹಾರ ಕೊಡುತ್ತಿದೆ. ಪರಿಹಾರ ನೋಡಿದ್ರೆ ಕೃಷಿ ಯಂತ್ರಗಳಿಗೆ ಹಾಕಿದ ಡಿಸೇಲ್ ಖರ್ಚು ಆಗೋದಿಲ್ಲ. ಶೀಘ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಕೃಷಿ ಸಚಿವರಿಗೆ ರೈತರಿಗೆ ಹೆಕ್ಟೇರ್ ಮೇಲೆ ಪರಿಹಾರ ಕೊಡಬೇಕೆಂದು ರೈತರ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಊರೂರು ಸುತ್ತುತ್ತಿರುವ ಮಹಿಳೆಯರು, ಕೂಲಿ ಕಾರ್ಮಿಕರ ಕೊರತೆ: ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರು‌ ಬಸ್​​ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಹೀಗೆ ಅವರು ಊರೂರು ತಿರುಗುತ್ತಿರುವುದರಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಸಿಗುವ ಕಾರ್ಮಿಕರು ದುಪ್ಪಟ್ಟು ಕೂಲಿ ಹೇಳುತ್ತಿದ್ದಾರೆ. ಹಾಗಾಗಿ, ರೈತರಿಗೆ ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಉಚಿತವಾಗಿ ಕೊಡುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕೆಂದು ಬಾಬಾಜಾನ್​ ವಿನಂತಿಸಿಕೊಂಡರು


Spread the love

About Laxminews 24x7

Check Also

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Spread the loveಶ್ರೀನಗರ: ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ  ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ