Breaking News

ಅಂತರ್ಜಲ ಮರುಪೂರಣ ಆಗಬೇಕಾದ್ರೆ ಅದಕ್ಕೆ ಕೆರೆಗಳು ಬೇಕೇ ಬೇಕು

Spread the love

ಧಾರವಾಡ: ಅಂತರ್ಜಲ ಮರುಪೂರಣ ಆಗಬೇಕಾದ್ರೆ ಅದಕ್ಕೆ ಕೆರೆಗಳು ಬೇಕೇ ಬೇಕು.

ಪ್ರತಿ ಮಳೆಗಾಲ ಬಂದಾಗ ಕೆರೆಗಳು ತನ್ನೆಲ್ಲ ಜಾಗ ಆಕ್ರಮಿಸಿ ಮೈತುಂಬ ತುಂಬಿಕೊಳ್ಳಬೇಕು. ಅಷ್ಟೇ ತುಂಬಿ ತುಳುಕಿ ಕೋಡಿ ಹರಿಯಬೇಕು.

ಹೀಗೆ ಮೈದುಂಬಿ ಕೋಡಿ ಹರಿಯುತ್ತಿರೋ ಈ ಕೆರೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಅಂಚಿನಲ್ಲಿದೆ. ಸುತ್ತಲೂ ಹಸಿರ ಸಿರಿಯ ಗುಡ್ಡದ ನಡುವೆ ವಿಶಾಲವಾದ ಕೆರೆ. ಈ ಕೆರೆಯ ಎರಡು ಕಡೆಯಲ್ಲಿ ಕೋಡಿ ಹರಿಯುತ್ತೆ. ಪ್ರತಿ ಸಲ ಮಳೆಗಾಲ ಬಂದಾಗ ಇಷ್ಟು ಸುಂದರವಾಗಿ ಕಾಣುತ್ತೆ.

ಗ್ರಾಮಸ್ಥರು ನಿನ್ನೆ ಗುರುವಾರವಷ್ಟೇ ಈ ಕೆರೆಗೆ ಭಕ್ತಿಯ ಬಾಗಿನ ಅರ್ಪಿಸಿದ್ದಾರೆ. ಕೆರೆ ಕೋಡಿ ಬಿದ್ದಿದ್ದನ್ನು ಕಂಡ ನರೇಂದ್ರ ಗ್ರಾಮದ ಜನತೆ
ಸಂಭ್ರಮ ಪಟ್ಟಿದ್ದಾರೆ.


Spread the love

About Laxminews 24x7

Check Also

ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ (ವರ್ಚುವಲ್) ಸಭೆ 

Spread the loveABArK ಅಡಿ ಎಲ್ಲ ಆಸ್ಪತ್ರೆಗಳಲ್ಲಿ ಬಾಕಿ ಇರುವ ಕೇಸ್ ಗಳನ್ನು SAST ನಲ್ಲಿ ದಾಖಲಿಸುವಂತೆ ಸೂಚಿಸಲಾಯಿತು. ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ