Breaking News

ಎನ್​ಸಿಪಿ ನಾಯಕ ಶರದ್ ಪವಾರ್ ಅವರು ಪುಣೆಯಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇಂಡಿಯಾ ಒಕ್ಕೂಟದ ಅಸಮಾಧಾನಕ್ಕೆ ಕಾರಣ

Spread the love

ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆ ಬಿಜೆಪಿ, ಕಾಂಗ್ರೆಸ್​ ಈಗಾಗಲೇ ಭರದ ಸಿದ್ಧತೆಯನ್ನು ನಡೆಸುತ್ತಿದೆ.

ಕಾಂಗ್ರೆಸ್​ ನೇತೃತ್ವದ ಇಂಡಿಯಾ ಒಕ್ಕೂಟ ( ಇಂಡಿಯನ್​ ನ್ಯಾಷನಲ್​ ಡೆವಲಪ್​ಮೆಂಟ್​ ಇನ್​​ಕ್ಲೂಸಿವ್​ ಅಲಯನ್ಸ್​) ಬಿಜೆಪಿಯನ್ನು ಸೋಲಿಸಲು ರಣ ತಂತ್ರ ರೂಪಿಸುತ್ತಿದೆ. ಈಗಾಗಲೇ 26 ವಿರೋಧ ಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ತೊಡೆ ತಟ್ಟಿದೆ.

ಈಗಾಗಲೇ ಈ ಸಂಬಂಧ ಎರಡು ಸಭೆಗಳನ್ನು ನಡೆಸಿರುವ ಕಾಂಗ್ರೆಸ್​ ತನ್ನ ಮುಂದಿನ ಇಂಡಿಯಾ ಒಕ್ಕೂಟದ ಸಭೆಯನ್ನು ಮುಂಬೈನಲ್ಲಿ ಇರಿಸಿಕೊಂಡಿದೆ. ಆಗಸ್ಟ್​ 25-26ರಂದು ಇಂಡಿಯಾ ಒಕ್ಕೂಟದ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಈ ನಡುವೆ ಆಗಸ್ಟ್​​ 1ರಂದು ಪುಣೆಯಲ್ಲಿ ಆಯೋಜಿಸಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಎನ್​ಸಿಪಿ ನಾಯಕ ಶರದ್​ ಪವಾರ್​ ಭಾಗವಹಿಸುತ್ತಿರುವುದು ಇಂಡಿಯಾ ಒಕ್ಕೂಟದ ಅಸಮಾಧಾನಕ್ಕೆ ಕಾರಣವಾಗಿದೆ.

ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವ ಪವಾರ್ : ಆಗಸ್ಟ್​ 1ರಂದು ಮಹಾರಾಷ್ಟ್ರದ ಪುಣೆಯಲ್ಲಿ ತಿಲಕ್ ಸ್ಮಾರಕ್​ ಮಂದಿರ್​ ಟ್ರಸ್ಟ್​​ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಎನ್​ಸಿಪಿ ನಾಯಕ ಶರದ್​ ಪವಾರ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಶರದ್​ ಪವಾರ್​ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕ ಮಾನ್ಯ ತಿಲಕ್​ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಈ ಸಂಬಂಧ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.ಈ ಬಗ್ಗೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎನ್​ಸಿಪಿ ನಾಯಕ ಶರದ್​ ಪವಾರ್ ಅವರಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಒತ್ತಾಯಿಸಬೇಕೆಂದು ಆಗ್ರಹಿಸಲಾಗಿದೆ.

ಇಂಡಿಯಾ ಒಕ್ಕೂಟದ ಮೇಲೆ ವ್ಯತಿರಿಕ್ಷ ಪರಿಣಾಮ: ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರಲ್ಲೊಬ್ಬರಾದ ಶರದ್​ ಪವಾರ್ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಒಕ್ಕೂಟದ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. 2024 ಚುನಾವಣೆ ಹಿನ್ನಲೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಸಮಾನಮನಸ್ಕ ವಿರೋಧ ಪಕ್ಷಗಳು ಒಗ್ಗೂಡುತ್ತಿರುವಾಗ ಪ್ರಧಾನಿ ಮೋದಿ ಜೊತೆಗೆ ಶರದ್​ ಪವಾರ್​ ವೇದಿಕೆ ಹಂಚಿಕೊಳ್ಳುವುದು ಒಕ್ಕೂಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜನರಿಗೆ ಕೆಟ್ಟ ಸಂದೇಶ ರವಾನಿಸದಂತಾಗುತ್ತದೆ. ಈ ಒಕ್ಕೂಟವನ್ನು ಬಹಳ ಶ್ರಮದಿಂದ ಕಟ್ಟಲಾಗಿದೆ. ಇಂಡಿಯಾ ಒಕ್ಕೂಟವನ್ನು ಈಸ್ಟ್​ ಇಂಡಿಯಾ ಕಂಪೆನಿ ಹಾಗೂ ಉಗ್ರ ಸಂಘಟನೆ ಇಂಡಿಯನ್​ ಮುಜಾಹಿದ್ದೀನ್​ ಜೊತೆ ಹೋಲಿಕೆ ಮಾಡಿರುವ ಪ್ರಧಾನಿ ಜೊತೆ ವೇದಿಕೆ ಹಂಚಿಕೊಳ್ಳವುದು ಸರಿಯಲ್ಲ ಎಂದು ಹೇಳಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ