Breaking News

ತಡವಾಗಿಯಾದರೂ ಭೋರ್ಗರೆಯುತ್ತ ಮುಂಗಾರು ಮಳೆ ದೇಶಾದ್ಯಂತ ಹೆಚ್ಚಿನ ಅನಾಹುತ ಸೃಷ್ಟಿಸುತ್ತಿದೆ.

Spread the love

ಏತೂರುನಗರ (ತೆಲಂಗಾಣ): ತಡವಾಗಿಯಾದರೂ ಭೋರ್ಗರೆಯುತ್ತ ಮುಂಗಾರು ಮಳೆ ದೇಶಾದ್ಯಂತ ಹೆಚ್ಚಿನ ಅನಾಹುತ ಸೃಷ್ಟಿಸುತ್ತಿದೆ.

ಆಂಧ್ರಪ್ರದೇಶ, ತೆಲಂಗಾಣದಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. 3 ದಿನಗಳಿಂದ ಸತತ ಮಳೆಯಾಗಿದ್ದು ಪ್ರವಾಹ ಉಂಟಾಗಿದೆ. ಹೈದರಾಬಾದ್​ಗೆ ಸಮೀಪವಿರುವ ಏರೂತುನಗರ ಮಂಡಲದ ಕೊಂಡಾಯಿ ಗ್ರಾಮ ದಿಢೀರ್​ ಮಳೆಗೆ ಮುಳುಗಡೆಯಾಗಿದ್ದು, 8 ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋದ ರ್ದುರ್ಘಟನೆ ನಡೆದಿದೆ.

ತೀವ್ರ ಮಳೆ ಸುರಿದ ಕಾರಣ ಕೊಂಡಾಯಿ ಗ್ರಾಮದ ಕೆಲ ಮನೆಗಳು ಮುಳುಗಡೆಯಾಗಿವೆ. ಪ್ರಾಣ ರಕ್ಷಣೆಗೆಂದು 8 ಮಂದಿ ಊರಿನ ಕೆರೆಯನ್ನು ದಾಟುವಾಗ ಅಚಾನಕ್ಕಾಗಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಒಂದು ದಿನದ ಹುಡುಕಾಟದ ಬಳಿಕ ಮೃತದೇಹಗಳು ಪತ್ತೆಯಾಗಿವೆ.

ಮೊಹಮ್ಮದ್ ಮಜೀದ್ ಖಾನ್ (75) ಮತ್ತು ಅವರ ಪತ್ನಿ ಲಾಲ್​ಬೀಬಿ (65), ಶೇಖ್ ಮಹೆಬೂಬ್ ಖಾನ್ (60), ಮೊಹಮ್ಮದ್ ಷರೀಫ್ (55) ಮತ್ತು ಅವರ ಮಗ ಅಜರ್ (22), ಮೊಹಮ್ಮದ್ ರಶೀದ್ (52) ಮತ್ತು ಅವರ ಪತ್ನಿ ಕರೀಮಾ (42), ಗ್ರಾಮದ ಕೊಂಡಾಯಿ ಗೋವಿಂದರಾಜು ದೇವಸ್ಥಾನದ ಅರ್ಚಕರಾದ ದಬ್ಬಕಟ್ಲ ಸಮ್ಮಕ್ಕ (75) ಪ್ರಾಣ ಕಳೆದುಕೊಂಡವರು. ಗುರುವಾರ ರಾತ್ರಿ ಇವರೆಲ್ಲರೂ ಪ್ರವಾಹದಿಂದ ತಪ್ಪಿಸಿಕೊಳ್ಳಲು ಬೇರೊಂದು ಕಡೆಗೆ ಹೋಗುತ್ತಿದ್ದಾಗ ನೀರಿಗೆ ಸಿಲುಕಿದ್ದರು.

ಭಾರೀ ಮಳೆಯಿಂದಾಗಿ ಕೊಂಡಾಯಿ ಗ್ರಾಮ ಹಿಂದೆಂದೂ ಕಾಣದ ರೀತಿ ಪ್ರವಾಹಕ್ಕೆ ತುತ್ತಾಗಿದೆ. ಬುಧವಾರದಿಂದಲೂ ಮಳೆ ನೀರು ಹೆಚ್ಚಾಗಿ ಪ್ರವಾಹ ಸೃಷ್ಟಿಯಾಗಿ ಗುರುವಾರ ಮಧ್ಯಾಹ್ನ ನೀರು ದಿಢೀರ್ ಗ್ರಾಮವನ್ನು ಮುಳುಗಿಸಿದೆ. ಗ್ರಾಮಸ್ಥರೆಲ್ಲಾ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಖಾಲಿ ಮಾಡಿದ್ದಾರೆ. ಪ್ರವಾಹ ಹೆಚ್ಚಾಗುತ್ತಿದ್ದಂತೆ ಜನರು ಮಲ್ಯಾಳ ಗ್ರಾಮಕ್ಕೆ ತೆರಳಲು ಆರಂಭಿಸಿದ್ದಾರೆ. ಎರಡು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ನುಗ್ಗಿ ಬಂದ ಮಳೆ ನೀರಿನಲ್ಲಿ 8 ಮಂದಿ ಕೊಚ್ಚಿಕೊಂಡು ಹೋಗಿದ್ದರು.

ಜೀವ ತೆಗೆದ ಮೋರಿ: ಕೊಂಡಾಯಿ ಮತ್ತು ಮಲ್ಲಯ್ಯ ಗ್ರಾಮಗಳ ನಡುವೆ ಹೊಸ ಮೋರಿ ನಿರ್ಮಿಸಲಾಗಿದೆ. ಸಿಮೆಂಟ್ ಪೈಪ್ ಹಾಕಿ ಮಣ್ಣು ಸುರಿದು ಮೇಲೆ ರಸ್ತೆ ಮಾಡಲಾಗಿದೆ. ಡಬಲ್ ರೋಡ್​ ನಿರ್ಮಾಣದ ಸಲುವಾಗಿ ಹಳೆಯದಾಗಿದ್ದ ಮೋರಿಯನ್ನು ತೆರವು ಮಾಡಿ ಹೊಸದಾಗಿ ನಿರ್ಮಾಣ ಮಾಡಲಾಗಿತ್ತು. ಮಳೆ ನೀರಿನ ಪ್ರವಾಹದ ರಭಸಕ್ಕೆ ಮೋರಿ ಸಂಪೂರ್ಣ ಕೊಚ್ಚಿ ಹೋಗಿದ್ದು, ಆಳವಾದ ಗುಂಡಿ ಬಿದ್ದಿದೆ


Spread the love

About Laxminews 24x7

Check Also

ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಅನ್ನೋದು ತಪ್ಪು: ಪಂಡಿತಾರಾಧ್ಯಶ್ರೀ ಅಭಿಪ್ರಾಯ ವಿರೋಧಿಸಿದ ವಚನಾನಂದಶ್ರೀ

Spread the loveಚಿತ್ರದುರ್ಗ, ಸೆಪ್ಟೆಂಬರ್ 7: ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಎಂಬರ್ಥದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ