Breaking News

ಕಳೆದುಕೊಂಡ 82 ಮೊಬೈಲ್​ಗಳನ್ನು ಸಾರ್ವಜನಿಕರಿಗೆ ಹಸ್ತಾಂತರಿಸಿದ ಎಸ್ಪಿ

Spread the love

ಗದಗ: ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಎಸ್ಪಿ ಬಿ.ಎಸ್.

ನೇಮಗೌಡ ಅವರು ಮೊಬೈಲ್​ಗಳನ್ನು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಕಳೆದುಕೊಂಡ ಮೊಬೈಲ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದೇವೆ. ಈ ಮೂಲಕ ಶನಿವಾರ ಒಟ್ಟು 82 ಮೊಬೈಲ್​ಗಳನ್ನು ಸಾರ್ವಜನಿಕರಿಗೆ ಹಸ್ತಾಂತರಿಸಲಾಗಿದೆ. ನಗರದ ಟೌನ್ ಪಿಎಸ್​ನಿಂದ 3, ರೂರಲ್ ಪಿಎಸ್​ನಿಂದ- 5, ಬೆಟಿಗೇರಿ ಪಿಎಸ್​ನಿಂದ- 2, ಲಕ್ಷ್ಮೇಶ್ವರ ಪಿಎಸ್- 3, ಶಿರಹಟ್ಟಿ ಪಿಎಸ್- 3, ನರಗುಂದ ಪಿಎಸ್- 5, ರೋಣ ಪಿಎಸ್- 8, ಗಜೇಂದ್ರಗಡ ಪಿಎಸ್- 4, ಮುಂಡರಗಿ ಪಿಎಸ್- 10, ನರೇಗಲ್ ಪಿಎಸ್- 1, ಸಿಇಎನ್​ಪಿಎಸ್- 6, ಟೆಕ್ ಸೆಲ್- 28 ಸೇರಿದಂತೆ ಒಟ್ಟು 12 ಲಕ್ಷ 11 ಸಾವಿರ ಬೆಲೆ ಬಾಳುವ 82 ಮೊಬೈಲ್ ಹಸ್ತಾಂತರಿಸಿದ್ದೇವೆ” ಎಂದರು.

ಸಾರ್ವಜನಿಕರು ತಮ್ಮ ಮೊಬೈಲ್ ಫೋನ್​ಗಳನ್ನು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಜಾಗೃತಿಯಿಂದ ಇಟ್ಟುಕೊಳ್ಳಬೇಕು ಎಂದು ಅವರು, ಮೊಬೈಲ್ ಪತ್ತೆಗಾಗಿ ನಾವು ವಿಶೇಷ ಜಾಗೃತಿ ವಹಿಸುತ್ತಿದ್ದು, ಮೊಬಿಫೈ ಹಾಗೂ ಸಿಈಆರ್​ಐನಲ್ಲಿ ಕಳೆದುಹೋದ ಮೊಬೈಲ್ ಪತ್ತೆಗೆ ಕ್ರಮ ವಹಿಸುತ್ತೇವೆ ಎಂದರು. ಶನಿವಾರ ಹಸ್ತಾಂತರಿಸಿದ ಮೊಬೈಲ್​ಗಳನ್ನು ಅಂತರ್ ಜಿಲ್ಲೆ ಹಾಗೂ ಅಂತರ ರಾಜ್ಯದಿಂದ ಪತ್ತೆ ಹಚ್ಚಿ ತಂದಿದ್ದೇವೆ. ಮೊಬೈಲ್ ಪತ್ತೆಹಚ್ಚಲು ಶ್ರಮವಹಿಸಿದ ಪೊಲೀಸ್ ಸಿಬ್ಬಂದಿಗೆ ಬಹುಮಾನ ನೀಡಲಾಗುವುದು ಎಂದು ಎಸ್ಪಿ ಬಿ.ಎಸ್. ನೇಮಗೌಡ ತಿಳಿಸಿದರು.


Spread the love

About Laxminews 24x7

Check Also

2025 – 26 ಹಂಗಾಮಿನಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಿಸಿ ಸರ್ಕಾರದಿಂದ ಅಧಿಕೃತ ಆದೇಶ

Spread the love ಬೆಂಗಳೂರು: 2025-26ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹೆಚ್ಚುವರಿ ಕಬ್ಬು ಬೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ