Breaking News

ಜನರ ಆಶೀರ್ವಾದ ಇಲ್ಲಎಂದಾಗಲು ಅಧಿಕಾರದ ಹಪಾಹಪಿ ಬಿಜೆಪಿಯವರಿಗೆ ಜಾಸ್ತಿಯಾಗಿದೆ:R.B. ತಿಮ್ಮಾಪೂರ

Spread the love

ಬಾಗಲಕೋಟೆ: ”ಜನರ ಆಶೀರ್ವಾದ ಇಲ್ಲಎಂದಾಗಲು ಅಧಿಕಾರದ ಹಪಾಹಪಿ ಬಿಜೆಪಿಯವರಿಗೆ ಜಾಸ್ತಿಯಾಗಿದೆ” ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಕೆಪಿಡಿ ಸಭೆ ನಡೆಸಲು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, ಸಿಂಗಪುರದಲ್ಲಿ ಆಪರೇಷನ್‌ ಸರ್ಕಾರ ಕೆಡವಲು ಯೋಚನೆ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ”ಬಿಜೆಪಿಯವರಿಗೆ ಜನರ ಆಶೀರ್ವಾದ ದೊರೆತಿಲ್ಲ. ಜನ ತಿರಸ್ಕರಿಸಿದರೂ ಬಿಜೆಪಿಯವರು ಅಧಿಕಾರದ ದಾಹದಿಂದ ಈ ಪ್ರಯತ್ನ ನಡೆದಿರಬಹುದು” ಎಂದು ಹೇಳಿದರು.

”ನನಗೆ ಆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಮುಧೋಳದಲ್ಲಿದ್ದೇನೆ. ನಾನಿನ್ನೂ ಅಲ್ಲಿಯ ವಿಷಯಗಳನ್ನು ತಿಳಿದುಕೊಂಡಿಲ್ಲ” ಎಂದ ಅವರು, ”ಬಿಜೆಪಿಗರು ಯಾವಾಗಲೂ ಅಡ್ಡದಾರಿಯ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಪ್ರಯತ್ನ ನಡೆದಿರಬಹುದು. ಆದರೆ, ಈ ಕುರಿತು ನನಗೆ ಗೊತ್ತಿಲ್ಲ” ಎಂದು ಜಾರಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ 25 ಶಾಸಕರಿಂದ ಸಿಎಂ ದೂರು ನೀಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ”ಏನಾದರೂ ಅಡಚಣೆಗಳು ಇದ್ದರೆ ಸಿಎಂ ಹತ್ತಿರ ಹೋಗೋದು ಸಹಜ ಅಲ್ವಾ ಎಂದು ತಿಳಿಸಿದರು. ಅಂತಹ ಏನಾದರೂ ಇದ್ದರೆ ನಮ್ಮ ಸಿಎಂ ಸರಿಪಡಿಸುತ್ತಾರೆ. ಶಾಸಕರು, ಮಂತ್ರಿಗಳು ಕೆಲಸ ಮಾಡಬೇಕಾದರೆ ಏರುಪೇರುಗಳಾಗುತ್ತದೆ ಎಂದರು.


Spread the love

About Laxminews 24x7

Check Also

ಕಬ್ಬು ಬೆಳೆಗಾರರ ಹೋರಾಟ ಅಂತ್ಯ – ಜಿಲ್ಲಾಧಿಕಾರಿ ಆನಂದ ಕೆ. ಮಧ್ಯಸ್ಥಿಕೆಯಿಂದ ಪರಿಹಾರ

Spread the love ಕಬ್ಬು ಬೆಳೆಗಾರರ ಹೋರಾಟ ಅಂತ್ಯ – ಜಿಲ್ಲಾಧಿಕಾರಿ ಆನಂದ ಕೆ. ಮಧ್ಯಸ್ಥಿಕೆಯಿಂದ ಪರಿಹಾರ ವಿಜಯಪುರದಲ್ಲಿ ಕಳೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ