Breaking News

ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಜೀವ ಜೀವಾವಧಿ ಶಿಕ್ಷೆ ವಿಧಿಸಿದೆ.

Spread the love

ಬಾಗಲಕೋಟೆ: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಅಪಾರಾಧಿಗೆ ಅಜೀವ ಜೀವಾವಧಿ ಶಿಕ್ಷೆ ಜೊತೆಗ 42 ಸಾವಿರ ರೂ.

ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಹನಮಂತ ಮಾಗುಂಡಪ್ಪ ಹುಲಸಗೇರಿ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.

ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದವನಾದ ಈತ 2019ರ ಮೇ.17 ರಂದು ಗ್ರಾಮದಲ್ಲಿ ದ್ಯಾಮವ್ವ ದೇವಿಯ ಉಡಿ ತುಂಬುವ ಕಾರ್ಯಕ್ರಮ ಇತ್ತು, ಗ್ರಾಮದ ಮನೆಯೊಂದರಲ್ಲಿ ಬುದ್ಧಿಮಾಂದ್ಯ ಮಹಿಳೆ ಒಬ್ಬಳೇ ಇದ್ದಾಗ ಮಧ್ಯಾಹ್ನ ಸಮಯದಲ್ಲಿ ಅಕ್ರಮವಾಗಿ ಮನೆಯ ಪ್ರವೇಶ ಮಾಡಿ ಅತ್ಯಾಚಾರ ಎಸಗಿದ್ದ. ಅಲ್ಲದೇ ತಪ್ಪಿಸಿಕೊಂಡು ಹೋಗುವಾಗ ಸಂತ್ರಸ್ತ ಮಹಿಳೆಗೆ ತೆಲೆಗೆ ಗಾಯಪಡಿಸಿ ಜೊತೆಗೆ ಮನೆಯಲ್ಲಿದ್ದ ಮೊಬೈಲ್​ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದೇ ಇರುವುದರಿಂದ ಬೆರಳಚ್ಚು ತಜ್ಞರು ಪರಿಶೀಲನೆ ವೇಳೆ ಆಕಸ್ಮಿಕವಾಗಿ ಸಿಕ್ಕ ಬೆರಳು ಮುದ್ರೆ ಹಾಗೂ ಅಪರಾಧಿ ಮಹಿಳೆ ದೇಹದ ಮೇಲೆ ಹಲ್ಲಿನಿಂದ ಕಚ್ಚಿದ್ದ ಗುರುತುಗಳನ್ನು ಅಪರಾಧಿ ಹಲ್ಲಿನೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಇದು ಆತನದ್ದೇ ಎಂದು ಖಚಿತವಾಗಿದೆ. ನಂತರ ಬಾದಾಮಿ ಸಿಪಿಐ ಕೆ.ಎಸ್.ಹಟ್ಟಿ ತನಿಖೆ ನಡೆಸಿದಾಗ, ವೈದ್ಯಕೀಯ ಪರೀಕ್ಷೆಯಲ್ಲಿ ಹನುಮಂತ ಹುಲಸಗೇರಿ ಮಾಡಿರುವ ಕೃತ್ಯ ಬೆಳಕಿಗೆ ಬಂದಿತ್ತು. ನಂತರ ಆತನನ್ನು ಬಂಧಿಸಿ, ಮನೆಯಲ್ಲಿ ಕಳವಾಗಿದ್ದ ಮೊಬೈಲ್​ ಅನ್ನು ಸಹ ವಶ ಪಡಿಸಿಕೊಳ್ಳಲಾಗಿತ್ತು.


Spread the love

About Laxminews 24x7

Check Also

ಕಬ್ಬು ಬೆಳೆಗಾರರ ಹೋರಾಟ ಅಂತ್ಯ – ಜಿಲ್ಲಾಧಿಕಾರಿ ಆನಂದ ಕೆ. ಮಧ್ಯಸ್ಥಿಕೆಯಿಂದ ಪರಿಹಾರ

Spread the love ಕಬ್ಬು ಬೆಳೆಗಾರರ ಹೋರಾಟ ಅಂತ್ಯ – ಜಿಲ್ಲಾಧಿಕಾರಿ ಆನಂದ ಕೆ. ಮಧ್ಯಸ್ಥಿಕೆಯಿಂದ ಪರಿಹಾರ ವಿಜಯಪುರದಲ್ಲಿ ಕಳೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ