Breaking News

ಧಾರಾಕಾರ ಮಳೆ ರಭಸಕ್ಕೆ ಭೂತರಾಮನಹಟ್ಟಿಯಲ್ಲಿ ಮನೆಯ ಗೋಡೆ, ಛಾವಣಿ ಕುಸಿದು ಬಿದ್ದಿದೆ.

Spread the love

ಬೆಳಗಾವಿ ಭಾಗದಲ್ಲಿ ಕಳೆದ 10-12 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಅವಾಂತರ ಸೃಷ್ಟಿಸಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳ ಕುಸಿತ ಮುಂದುವರಿದಿದೆ. ತಾಲೂಕಿನ ಭೂತರಾಮನಹಟ್ಟಿಯಲ್ಲಿ ಮಳೆಯ ರಭಸಕ್ಕೆ ಮನೆಯ ಗೋಡೆ, ಛಾವಣಿ ಕುಸಿದು ಬಿದ್ದಿದೆ.

 

ಬೆಳಗಾವಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಮಳೆಯಿಂದ ಮರಗಳು ಮತ್ತು ಮನೆಗಳ ನೆಲಕೆ ಉರುಳುತ್ತಿವೆ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದೆ. ಶಬ್ಧ ಕೇಳಿದ ತಕ್ಷಣ ಮನೆಯವರೆಲ್ಲರು ಹೊರಗೆ ಓಡಿ ಬಂದಿದ್ದರಿಂದ ಪ್ರಾಣ ಉಳಿಸಿಕೊಡಿದ್ದಾರೆ. ಮನೆಯ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಕ್ಷ್ಮಿ ಲಗ್ಮಾ ಹೊಂಡಾಯಿ ಅವರ ಮನೆಯ ಮುಂಭಾಗದ ಗೋಡೆಯು ಮೊದಲು ಕುಸಿದಿದೆ. ಇದಾದ ಬಳಿಕ ಮನೆಯ ಮೇಲ್ಛಾವಣಿಯೂ ಕುಸಿದಿದೆ. ಕುಟುಂಬಸ್ಥರು ಮನೆಯಲ್ಲಿದ್ದಾಗ ಅವಘಡ ಸಂಭವಿಸಿದ್ದು, ಅವರು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಂಡಾಯಿ ಕುಟುಂಬ ಹಣವಿಲ್ಲದೆ ಬಡವರಾಗಿದ್ದು, ಸರಕಾರದಿಂದ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಘಟನೆ ದಾಖಲಾಗಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ