ಮಂಡ್ಯ: ಬಿಜೆಪಿಯವರ ಕಚೇರಿಗೆ ಕುಮಾರಸ್ವಾಮಿ ಹೋಗಿದ್ದಾರೆ.
ಅಂದ್ರೆ ದೇವೇಗೌಡರ ಮಾತಿಗೆ ಕಿಮ್ಮತ್ತಿಲ್ಲ ಎಂದು ಅರ್ಥ. ಹೊಂದಾಣಿಕೆ ಸಂಬಂಧ ದೇವೇಗೌಡರು ಹಾಗೂ ಕುಮಾರಸ್ವಾಮಿ ದ್ವಂದ್ವ ನಿಲುವಿನ ವಿಚಾರದ ಬಗ್ಗೆ ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
”ಜೆಡಿಎಸ್ ಪಕ್ಷದಲ್ಲಿ ದೇವೇಗೌಡರ ಮಾತಿಗೆ ಕಿಮ್ಮತ್ತಿಲ್ಲ. ದೇವೇಗೌಡರು ಈವರೆಗೂ ಪಕ್ಷವನ್ನ ಇನ್ನೊಂದು ಪಕ್ಷದೊಂದಿಗೆ ವಿಲೀನ ಮಾಡುವ ನಿರ್ಧಾರ ತಗೆದುಕೊಂಡಿಲ್ಲ. ಎಷ್ಟೇ ಸ್ಥಾನಗಳನ್ನ ಗೆಲ್ಲಲಿ ಹೋರಾಟ ಮಾಡ್ಕೊಂಡು ಬಂದಿದ್ದಾರೆ. ಇವತ್ತು ದೇವೇಗೌಡರು ಕಟ್ಟಿಬೆಳೆಸಿದ ಪಕ್ಷವನ್ನು ಬೇರೆ ಪಕ್ಷದೊಂದಿಗೆ ಸೇರಿಸುತ್ತಾರೆ ಎಂದರೇ ಸೇರಿಸಲಿ. ಅದು ಅವರ ಪಕ್ಷದ ತೀರ್ಮಾನ, ನಾವ್ಯಾಕೆ ಬೇಡ ಎನ್ನಲಿ. ಒಬ್ಬರು ಪೈಪೋಟಿ ಕೊಡಲು ಆಗಲ್ಲ ಅಂತಾ ಇಬ್ಬರು ಸೇರುತ್ತಿದ್ದಾರೆ. ನೋಡೋಣ ಜನರು ಅದರ ಬಗ್ಗೆ ಏನು ತೀರ್ಮಾನ ಮಾಡ್ತಾರೆ” ಎಂದು ಕಿಡಿಕಾರಿದರು.
ಸಿಎಂ ಬಗ್ಗೆ ಯಾವುದೇ ಅಪಸ್ವರ ಇಲ್ಲ: ಇನ್ನೂ ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ”ಯಾವ ಕಾರಣಕ್ಕೆ ಆಗೆ ಹೇಳಿದ್ದಾರೋ ನಾನು ನೋಡಿಲ್ಲ. ಅದು ಅನವಶ್ಯಕವಾಗಿದ್ದು, ಬಹುಶಃ ಆಗೆ ಹೇಳಿರೋಕೆ ಸಾಧ್ಯವಿಲ್ಲ. ನಮ್ಮ ಪಾರ್ಟಿಯಲ್ಲಿ ಆ ಥರಹದ ಆಲೋಚನೆಯೇ ಇಲ್ಲ. ಸಿಎಂ ಬಗ್ಗೆ ಯಾವುದೇ ಅಪಸ್ವರ ಇಲ್ಲ. ಸಿಎಂ ಸದೃಢವಾಗಿದ್ದಾರೆ, ಸರ್ಕಾರವು ಸದೃಢವಾಗಿದೆ ಎಂದ ಅವರು, ಐದು ಗ್ಯಾರಂಟಿ ಕೊಟ್ಟಿರುವುದೇ ನಮ್ಮ ಪಕ್ಷಕ್ಕೆ, ಸರ್ಕಾರಕ್ಕೆ ಹೆಗ್ಗಳಿಕೆ. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ” ಎಂದರು.