ಮಹಿಳೆಯೊಬ್ಬರು ಮಗಳೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮಹಾದೇವಿ ಇಂಚಲ (34) ಮತ್ತು ಚಾಂದಿನಿ ಇಂಚಲ (7) ಆತ್ಮಹತ್ಯೆ ಮಾಡಿಕೊಂಡವರು.
ಸಹೋದರ ಹಾಗೂ ನಾದಿನಿಯ ಕಿರುಕುಳದಿಂದ ಬೇಸತ್ತ ಗೃಹಿಣಿ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಸೈನಿಕನೊಂದಿಗೆ ಮಹಾದೇವಿ ವಿವಾಹವಾಗಿದ್ದರು. ಏಳು ವರ್ಷಗಳ ಹಿಂದೆ ಅವರ ಪತಿ ಅಕಾಲಿಕ ಮರಣ ಹೊಂದಿದ್ದರು. ಹೀಗಾಗಿ ಈ ಮಹಿಳೆ ತನ್ನ ಮಗಳ ಜೊತೆ ದಿಂಡಲಕೊಪ್ಪದಲ್ಲಿರುವ ತನ್ನ ಹುಟ್ಟೂರು ಮನೆಯಲ್ಲಿ ವಾಸವಾಗಿದ್ದಳು. ಆದರೆ ಇದಕ್ಕೆ ಆಕೆಯ ಸಹೋದರ ಹಾಗೂ ನಾದಿನಿ ವಿರೋಧ ವ್ಯಕ್ತಪಡಿಸಿದ್ದರು.