ಡೆಲಿವರಿ ಬಾಯ್ಸ್‌ಗೆ ಬಿಗ್ ರಿಲೀಫ್!
Swiggy, zomato ಮತ್ತು Amazon ನಂತಹ ಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ ಸರ್ಕಾರವು 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ಕೊಡುವುದಾಗಿ ಘೋಷಣೆ ಮಾಡಿದೆ.
ಅಪಘಾತ ವಿಮೆ ಕೊಡುವುದಾಗಿ ಘೋಷಣೆ!
ಹೊಟ್ಟೆ ಪಾಡಿಗೆ ದಿನವಿಡೀ ಕಷ್ಟ ಪಟ್ಟು ದುಡಿಯುತ್ತಿರುವ ವರ್ಗ ಅಂದ್ರೆ ಅದು ಡೆಲಿವರಿ ಮಾಡುವ ಕೆಲಸಗಾರರು ಅಂದರೆ ತಪ್ಪಾಗಲ್ಲ. ಅದರಲ್ಲೂ ಈ ಸ್ವಿಗ್ಗಿ, ಜೊಮ್ಯಾಟೋದಲ್ಲಿ ಎಷ್ಟು ಗಂಟೆಗೆ ಆರ್ಡರ್ ಮಾಡಿದ್ರೂ ನಿಮ್ಮ ಮನೆ ಬಾಗಿಲಿಗೆ ಬಿಸಿ ಬಿಸಿ ಆಹಾರವನ್ನು ತಂದು ಕೊಡುವವರು ಡೆಲಿವರಿ ಬಾಯ್ಸ್.
ಇತ್ತೀಚೆಗೆ ರಾತ್ರಿ ಸಮಯದಲ್ಲಿ ಡೆಲಿವರಿ ಬಾಯ್ಸ್ ಡೆಲಿವರಿ ಮಾಡುವಾಗ ಅಪಘಾತವಾಗಿರುವ ಘಟನೆಗಳು ಹೆಚ್ಚಾಗುತ್ತಲೇ ಇದೆ. ಮೊನ್ನೆಯಷ್ಟೇ ಮೈಸೂರು ರಸ್ತೆಯಲ್ಲಿ ಡೆಲಿವರಿ ಏಜೆಂಟ್‌ಗೆ ಕಾರು ಗುದ್ದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನೆಲ್ಲಾ ಪರಿಗಣಿಸಿರುವ ಸರ್ಕಾರ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ಕೊಡುವುದಾಗೊ ಘೋಷಿಸಿದೆ.
ಕೇವಲ ಸ್ವಿಗ್ಗಿ, ಜೊಮ್ಯಾಟೋ ಅಷ್ಟೇ ಅಲ್ಲದೇ ಈ ಕಾಮರ್ಸ್ ಸಂಸ್ಥೆಗಳ ಡೆಲಿವರಿ ಬಾಯ್ಸ್‌ಗೆ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.