ಧಾರವಾಡ: ಗರಗ ಪೊಲೀಸ್ ಠಾಣೆಗೆ ಒಳಪಡುವಂತಹ ಖಾನಾಪುರ ಕ್ರಾಸ್ ಬಳಿ ಆಕ್ರಮವಾಗಿ ಇಸ್ಪೀಟ್ ಅಡ್ಡೆ ನಡೆಸುತ್ತಿದ ವೇಳೆಯಲ್ಲಿ ಗರಗ ಠಾಣೆ ಪೊಲೀಸ್ ಕಚ್ಚಿತ ಮಾಹಿತಿ ಪ್ರಕಾರ ದಾಳಿಯನ್ನು ಮಾಡಿ 8 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ 8 ಆರೋಪಿಗಳಿಂದ ನಗದು, ಹಾಗೂ ಇಸ್ಪೀಟ್ ಆಡಲು ಬಳಸುತ್ತಿದ್ದ ಎಲೆಗಳನ್ನು ವಶಕ್ಕೆ ಪಡೆದುಕೊಂಡು, ಹಾಗೂ ಸದ್ಯ 8 ಜನರ ಆರೋಪಿಗಳ ಮೇಲೆ ಗರಗ ಪೊಲೀಸ ಠಾಣೆಯಲ್ಲಿ ಪ್ರಕರಣವನ್ನು ದಾಖಲೆ ಮಾಡಿ ಮುಂದಿನ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.