Breaking News

ಬೆಂಗಳೂರು- ಮೈಸೂರು ಹೆದ್ದಾರಿ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್

Spread the love

ಮಂಡ್ಯ: ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಂಡ್ಯ ಜಿಲ್ಲೆಯಲ್ಲಿ ಶುಕ್ರವಾರ ಎಡಿಜಿಪಿ ಅಲೋಕ್‌ ಕುಮಾರ್‌ ಪರಿಶೀಲನೆ ನಡೆಸಿದರು. ದಶಪಥ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಕಳೆದ ವಾರ ರಾಮನಗರ ವ್ಯಾಪ್ತಿಯಲ್ಲಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದ್ದರು.

ಇದೀಗ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗಡಿಭಾಗ ನಿಡಘಟ್ಟದಿಂದ ಮೈಸೂರು ಗಡಿಯವರೆಗೆ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಎಸ್ಪಿ ಎನ್.ಯತೀಶ್ ಜೊತೆಗಿದ್ದರು. ಹೆದ್ದಾರಿಯಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು ಹಾಗೂ ಅಪಘಾತಕ್ಕೆ ಕಾರಣ ಸೇರಿದಂತೆ ಹಲವು ವಿಷಯಗಳ ಕುರಿತು ಎನ್​ಹೆಚ್​ಎಐ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಅಲೋಕ್ ಕುಮಾರ್​ಗೆ ಹೆದ್ದಾರಿ ಕುರಿತು ವಾಹನ ಸವಾರರು ದೂರು ನೀಡಿದರು. ರಸ್ತೆಯ ಪಕ್ಕದಲ್ಲಿ ಕಲ್ಲು ಮಣ್ಣುಗಳು ಬಿದ್ದಿವೆ, ಸೂಕ್ತ ಕ್ರಮವನ್ನು ಹೆದ್ದಾರಿ ಪ್ರಾಧಿಕಾರ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವೃದ್ಧೆಯೊಬ್ಬರು ಕೈಮುಗಿದು ಅಳಲು ತೋಡಿಕೊಂಡರು. ”ಸ್ವಾಮಿ ಇವರು ಮಾಡಿರೋ ಕೆಲಸಕ್ಕೆ ನನ್ನ ಗುಡಿಸಲಿಗೆ ನೀರು ನುಗ್ಗುತ್ತಿದೆ. ಇವರು ಸರ್ವಿಸ್ ರಸ್ತೆಯ ಚರಂಡಿಯನ್ನು ಸರಿಯಾಗಿ ಮಾಡಿಲ್ಲ. ಮಳೆ ನೀರೆಲ್ಲ ನನ್ನ ಗುಡಿಸಲಿಗೆ ಬರುತ್ತಿದೆ. ನೆಮ್ಮದಿಯಾಗಿ ಬದುಕೋಕೆ ಆಗ್ತಾ ಇಲ್ಲ. ಅವರಿಗೆ ಹೇಳಿ ಸರಿ ಮಾಡಿಸಿ ಸ್ವಾಮಿ” ಎಂದು ಮನವಿ ಮಾಡಿದರು.


Spread the love

About Laxminews 24x7

Check Also

ಚಿತ್ತಾಪುರ RSS​ ಪಥಸಂಚಲನಕ್ಕೆ ಅನುಮತಿ ಬಗ್ಗೆ ನ.13ರಂದು ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

Spread the love ಬೆಂಗಳೂರು: ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ನೀಡುವುದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ