Breaking News

ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಪತಿ

Spread the love

ಚಿಕ್ಕೋಡಿ: ಪತಿಯು ತನ್ನ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಹಾರೂಗೇರಿ ಪಟ್ಟಣದಲ್ಲಿ ಗುರುವಾರ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ರುಕ್ಮವ್ವ ಉಪ್ಪಾರ (29) ಗಂಡನಿಂದಲೇ ಕೊಲೆಯಾಗಿದ್ದಾರೆ.

 

ಆರೋಪಿಯ ಹೆಸರು ಮಲ್ಲಪ್ಪ ಉಪ್ಪಾರ. ಕೊಲೆಗೆ ಸಾಂಸಾರಿಕ ವೈಮನಸ್ಸು ಕಾರಣವೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಲ್ಲಪ್ಪ ಸದಾಶಿವ ಉಪ್ಪಾರನನ್ನು ಬಂಧಿಸಲಾಗಿದೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

 

ಪತ್ನಿ ಹತ್ಯೆ ನಂತರ, ಪೊಲೀಸರಿಗೆ ಶರಣಾದ ಪತಿ: ಶೀಲ ಶಂಕಿಸಿ ಪತ್ನಿ ಕೊಲೆಗೈದ ಪತಿ ಪೊಲೀಸ್ ಠಾಣೆಗೆ ಹೋಗಿ‌ ಶರಣಾದ ಘಟನೆ ಮೈಸೂರು ನಗರದ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು. ಕೆಎಸ್‌ಆರ್‌ಟಿಸಿ ಲೇಔಟ್ ನಿವಾಸಿ ಲೋಕೇಶ್ ಆರಾಧ್ಯ ಆರೋಪಿ. ಪತ್ನಿ ಪಲ್ಲವಿ ಕೊಲೆಯಾದವರು. ಲೋಕೇಶ್ ಹಾಗೂ ಪಲ್ಲವಿ 9 ವರ್ಷದ ಹಿಂದೆ ವಿವಾಹವಾಗಿದ್ದರು. ಇವರಿಗೆ 7 ವರ್ಷದ ಮಗನಿದ್ದಾನೆ. ಈ ಹಿಂದೆ ಕೆಲಕಾಲ ದಂಪತಿ ಮೈಸೂರು ತಾಲೂಕಿನ ವರುಣಾದಲ್ಲಿ ನೆಲೆಸಿದ್ದರು. ಮಗನನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂಬ ಕಾರಣದಿಂದ ಕಳೆದ ಎರಡು ತಿಂಗಳ ಹಿಂದೆ ಮೈಸೂರಿಗೆ ಬಂದು ಕೆಎಸ್‌ಆರ್‌ಟಿಸಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.


Spread the love

About Laxminews 24x7

Check Also

ಅಕ್ಟೋಬರ್ 28ರಿಂದ ಸೋಯಾ, ಸೂರ್ಯಕಾಂತಿ, ಹೆಸರು ಖರೀದಿ ಆರಂಭ: ಸಚಿವ ಶಿವಾನಂದ ಪಾಟೀಲ

Spread the love ಬೆಂಗಳೂರು: ಬೆಂಬಲ ಬೆಲೆಯಲ್ಲಿ ಅಕ್ಟೋಬರ್ 28ರಿಂದ (ಮಂಗಳವಾರ) ಸೋಯಾಬಿನ್‌, ಸೂರ್ಯಕಾಂತಿ ಮತ್ತು ಹೆಸರುಕಾಳು ಖರೀದಿ ಪ್ರಕ್ರಿಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ