ಭತ್ತ ಬಿತ್ತಿದ ಗಂಡ ಹೆಂಡತಿ: ಮಳೆಗಾಗಿ ರೈತರ ಪ್ರಾರ್ಥನೆ!

Spread the love

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಮಳೆಗಾಗಿ ನಾನಾ ರೀತಿಯ ಪೂಜೆ ಮಾಡಿದರೂ‌ ಜನರ ಪ್ರಾರ್ಥನೆಗೆ ಮಳೆರಾಯ ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ.

ಆದರೂ ನಂಬಿಕೆ ಕಳೆದುಕೊಳ್ಳದ ರೈತರು ತಮ್ಮ ಕೃಷಿ ಚಟುವಟಿಕೆ ಮುಂದುವರಿಸಿದ್ದಾರೆ. ಒಣ ಹೊಲದಲ್ಲಿ ಕೈಯಿಂದಲೇ ಸಾಲು ಬಿಡುತ್ತಾ ಭತ್ತದ ಬಿತ್ತನೆ ಮಾಡುತ್ತಿದ್ದಾರೆ.

ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದ ಮಾಣಿಕವಾಡಿ ಗ್ರಾಮದ ಕೃಷ್ಣಾ ಗಾವಡಾ ಎಂಬುವವರ ಅರ್ಧ ಎಕರೆ ಜಮೀನು ಹೊಂದಿದ್ದು, ತಮ್ಮ ಪತ್ನಿ‌ ಅನುರಾಧಾ ಜೊತೆಗೆ ಭತ್ತದ ಬಿತ್ತನೆಯಲ್ಲಿ ತೊಡಗಿದ್ದಾರೆ. ಈ ವೇಳೆ ಈಟಿವಿ ಭಾರತದೊಂದಿಗೆ ತಮ್ಮ‌ ಸಂಕಷ್ಟ ಹೇಳಿಕೊಂಡ ರೈತ ಮಹಿಳೆ ಅನುರಾಧಾ ಗಾವಡಾ, ಮಳೆ ಆಗುತ್ತೆ ಎಂಬ ನಂಬಿಕೆಯಲ್ಲಿ ಭತ್ತ ಬಿತ್ತುತ್ತಿದ್ದೇವೆ. ಮಳೆ ಆಗದಿದ್ದರೆ ಹಾನಿಯಾಗಿ ನಷ್ಟವಾಗುತ್ತದೆ. ಅರ್ಧ ಎಕರೆ ಮಾತ್ರ ನಮ್ಮದು ಹೊಲ ಇರೋದರಿಂದ ಎತ್ತುಗಳು ಇಲ್ಲ. ಎತ್ತು ಇಲ್ಲದೇ ಇರುವುದಿರಂದ ನಮ್ಮ ಪತಿ ಕೈಯಿಂದಲೇ ಸಾಲು‌ ಬಿಡುತ್ತಿದ್ದಾರೆ. ಹಿಂದಿನಿಂದ ನಾನು ಭತ್ತ ಬಿತ್ತುತ್ತಿದ್ದೇನೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ರೈತ ಮಹಿಳೆ‌, ಸರ್ಕಾರ ಏನೋ ಅಷ್ಟೋ ಇಷ್ಟು ಪರಿಹಾರ ನೀಡುತ್ತದೆ. ಆದರೆ, ಆ ಪರಿಹಾರ ಮಾತ್ರ ನಮ್ಮ ಕೈಗೆ ಬಂದು ತಲುಪುವುದಿಲ್ಲ. ಪುಡಾರಿಗಳು, ದೊಡ್ಡ ಮಂದಿಗೆ ಪರಿಹಾರ ಹೋಗುತ್ತದೆ. ಹೀಗಾಗಿ ಮಳೆಯಾಗದೇ ನಮ್ಮ ಬೆಳೆ ಹಾನಿಯಾದರೆ ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು. ದೇವರ ದಯೆಯಿಂದ ಮಳೆಯಾದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.

ಭತ್ತವನ್ನೆ ಹೆಚ್ಚಾಗಿ ಬೆಳೆಯುವ ಖಾನಾಪುರ ತಾಲೂಕಿನ ರೈತರು ಮಳೆಯನ್ನೆ ನಂಬಿ ತಮ್ಮ ಕೃಷಿ ಮಾಡುತ್ತಾರೆ. ಮಲಪ್ರಭಾ ನದಿ, ಮಹದಾಯಿ, ಕಳಸಾ ಬಂಡೂರಿ‌ ನಾಲಾ ಸೇರಿ‌ ಸಾಕಷ್ಟು ಜಲಮೂಲ ಹೊಂದಿದ್ದರೂ ಮಳೆಯನ್ನೆ ನೆಚ್ಚಿಕೊಂಡಿರುವ ರೈತರು ಈ ಬಾರಿ ಸಕಾಲಕ್ಕೆ‌ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ಹಾನಿ ಭೀತಿ ಎದುರಿಸುತ್ತಿದ್ದಾರೆ.


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ