ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಶಾಸಕ ಸತೀಶ ಜಾರಕಿಹೊಳಿ ಗೌರವ ನಮನ ಸಲ್ಲಿಸಿದರು ಬಳಿಕ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಅಪ್ರತಿಮ ಹೋರಾಟಗಾರ. ಆತ ಒಂದು ಸಮುದಾಯಕ್ಕೆ ಸೀಮಿತವಲ್ಲ, ಇಡೀ ದೇಶದ ಆಸ್ತಿ. ರಾಯಣ್ಣ ಆದರ್ಶಗಳನ್ನು ಮೈಗೂಡಿಸಿಕೊಂಡು ನಾಡು, ನುಡಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಠಾಧೀಶರು, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಸಿ. ಎಸ್. ಮೊಖಾಶಿ, ಸಾಮಾಜಿಕ ಹೋರಾಟಗಾರ ಹಬೀಬ ಶಿಲೇದಾರ್, ಶಂಕರ ಹೊಳಿ, ವಿನಾಯಕ ಕಟ್ಟೀಕರ್, ಚಂದ್ರಕಾಂತ ಕಾದ್ರೊಳ್ಳಿ ಸೇರಿದಂತೆ ಮುಂತಾದವರು ಇದ್ದರು.