ಮಹಾರಾಷ್ಟ್ರ ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಜೀವಜಲ ಮೂಲವಾದ ಡ್ಯಾಮ್ ಗಳೂ ಖಾಲಿ ಖಾಲಿ ಆಗ್ತಿವೆ. ಮಳೆಗಾಗಿ ದೇವರ ಮೊರೆ ಹೋದ್ರು ಪ್ರಯೋಜನವಾಗಿಲ್ಲ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ, ಮಳೆಗಾಗಿ ಮೊಡ ಬಿತ್ತನೆಗೆ ಸರ್ಕಾರ ಚಿಂತನೆ ನಡೆಸಲಿದೆ ಅಂತಾ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮುನ್ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಳೆದ 19 ದಿನಗಳಿಂದ ಮುಂಗಾರು ಮಳೆಯ ಸುಳಿವಿಲ್ಲ. ಇದರಿಂದ ಮಹಾರಾಷ್ಟ್ರದ ಮತ್ತು ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ ಸಹ ಖಾಲಿ ಖಾಲಿಯಾಗಿದೆ. ಕೊಯ್ನಾ ಡ್ಯಾಮ್ 103 ಟಿ ಎಂ ಸಿ ಸಾಮರ್ಥ್ಯದ ಬೃಹತ್ ಆನೆಕಟ್ಟು. ಈ ಡ್ಯಾಮ್ ನಿಂದಲೇ ಉತ್ತರ ಕರ್ನಾಟಕದ ೬ ಜಿಲ್ಲೆಗಳಿಗೆ ನೀರಿನ ದಾಹ ನೀಗಿಸುತ್ತಿತ್ತು.
ಈಗ ಕೋಯ್ನಾ ಡ್ಯಾಮ್ ಸಹ ಡೆಡ್ ಸ್ಟೋರೆಜ್ ಹಂತ ತಲುಪಿದೆ. ಸದ್ಯ ಕೊಯ್ನಾ ಜಲಾಶಯದಲ್ಲಿ ಕೇವಲ 11.74 ಟಿ ಎಂ ಸಿ ನೀರು ಮಾತ್ರ ಸಂಗ್ರಹವಿದೆ. ಈ ಹಿಂದೆ ಕರ್ನಾಟಕಕ್ಕೆ ನೀರು ಬಿಡಿ ಎಂದು ಮಹಾರಾಷ್ಟ್ರ ಸಿ ಎಂ ಗೆ ಪತ್ರ ಬರೆದಿದ್ದರು ಸಿಎಂ ಸಿದ್ದರಾಮಯ್ಯ.ಆದ್ರೆ ನೀರಿಲ್ಲ ಎನ್ನುವ ಕಾರಣಕ್ಕೆ ಕೇವಲ 1500 ಕ್ಯೂಸೇಕ್ ನೀರು ಬಿಟ್ಟಿತ್ತು. ಸದ್ಯ ಮಹಾರಾಷ್ಟ್ರದಲ್ಲೂ ಸಹ ನೀರಿನ ಅಭಾವ ತಲೆದೂರಿದೆ. ಈ ಮಧ್ಯೆ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಸಂಪೂರ್ಣ ಬತ್ತಿ ಹೋಗಿದೆ. ಕೃಷ್ಣೆಯಂತೆ ಮಲಪ್ರಭಾ, ಘಟಪ್ರಭಾ ನದಿಯ ಸ್ಥಿತಿಯಿದೆ.
ಅದರಲ್ಲೂ ಕೃಷ್ಣಾ ನದಿಯಿಂದ ಉತ್ತರ ಕರ್ನಾಟಕದ ಬೆಳಗಾವಿ,ವಿಜಯಪುರ,ಬಾಗಲಕೋಟೆ,ಯಾದಗಿರಿ,ರಾಯಚೂರು ಸೇರಿದಂತೆ ೬ ಜಿಲ್ಲೆಗೆ ಜೀವಜಲದ ಮೂಲವಾಗಿತ್ತು. ಈಗ ಕೃಷ್ಣಾ ನದಿ ಖಾಲಿ ಖಾಲಿ ಆಗಿರೋದು ಕೃಷಿ ಚಟುವಟಿಕೆ ಸೇರಿ ಕುಡಿಯುವ ನೀರಿಗೂ ಜಿಲ್ಲೆಗಳಲ್ಲಿ ತಾತ್ವಾರದ ಪರಿಸ್ಥಿತಿ ಎದುರಾಗಿದೆ. ಇತ್ತ ಸರ್ಕಾರದ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನ ಜನರು ಎದುರಿಸದಂತೆ ಕ್ರಮವಹಿಸಲಿದೆ. ಮುಂದಿನ ಏಳು ದಿನಗಳ ಕಾಲ ಉತ್ತಮ ಮಳೆ ಆಗಲಿದೆ.
ಆದ್ರು ಅಗತ್ಯವಿರುವ ಕಡೆ ಈಗಾಗಲೇ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಿದ್ದಾರೆ.