Breaking News

ತಂದೆ ತಾಯಿಯ ಪ್ರೋತ್ಸಾಹ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಗಾವಿಯ ಈ ಪುಟಾಣಿಯೇ ಸಾಕ್ಷಿ.

Spread the love

ಬೆಳಗಾವಿ : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ತಂದೆ ತಾಯಿಯ ಪ್ರೋತ್ಸಾಹ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಬೆಳಗಾವಿಯ ಈ ಪುಟಾಣಿಯೇ ಸಾಕ್ಷಿ.

ಇಂಗ್ಲಿಷ್​ ರೈಮ್ಸ್ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಬರೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.

ಹೌದು, ಬೆಳಗಾವಿಯ ಫುಲಬಾಗ ಗಲ್ಲಿಯ 2 ವರ್ಷ 11 ತಿಂಗಳ ಮಾನ್ವಿ ಭರತ್ ನಿಲಜಕರ್ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸಾಧನೆ ಮೆರೆದ ಪುಟ್ಟ ಬಾಲಕಿ. ರೈಮ್ಸ್ ಉಚ್ಛಾರಣೆಯಲ್ಲಿ ಈ ಮೊದಲು ಬೆಂಗಳೂರಿನ ಹಿಶಿತಾ ಕೆ. ಎಂಬ ಐದು ವರ್ಷದ ಮಗು 20 ಇಂಗ್ಲಿಷ್ ರೈಮ್ಸ್ ಹಾಗೂ ಮಹಾರಾಷ್ಟ್ರ ರಾಜ್ಯದ ಅದ್ವಿಕಾ ಪಾಟಣಕರ್ (4 ವರ್ಷ 3 ತಿಂಗಳು) ಎಂಬ ಮಗು 22 ಇಂಗ್ಲಿಷ್ ರೈಮ್ಸ್ ಹೇಳಿರುವುದು ಈವರೆಗಿನ ದಾಖಲೆಯಾಗಿತ್ತು. ಆದರೆ, ಇದೀಗ 2 ವರ್ಷ 11 ತಿಂಗಳ ಮಾನ್ವಿ ಈ ಹಿಂದಿನ ಇವರೆಲ್ಲರ ದಾಖಲೆಗಳನ್ನು ಬ್ರೇಕ್ ಮಾಡಿ ಬೆಳಗಾವಿಗೆ ಕೀರ್ತಿ ತಂದಿದ್ದಾಳೆ.

ಕಳೆದ ಮೇ.13 ರಂದು ಆನ್‌ಲೈನ್ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಅಧಿಕಾರಿಗಳ ಮುಂದೆ ಜಾನಿ ಜಾನಿ ಎಸ್ ಪಪ್ಪಾ, ಟ್ವಿಂಕಲ್ ಟ್ವಿಂಕಲ್, ಓಲ್ಡ್ ಮೆಗ್‌ಡಾನಲ್ಡ್ ಸೇರಿ 17 ಇಂಗ್ಲೀಷ ರೈಮ್ಸ್, ಚಾಂದೋಬಾ ಚಾಂದೋಬಾ, ಜುಕು ಜುಕು ಅಗೀನ ಗಾಡಿ ಎಂಬ 2 ಮರಾಠಿ ರೈಮ್ಸ್ ಹಾಗೂ ಮಚಲಿ ಜಲ್ ಕಿ ರಾಣಿ, ಬಾರಿಷ್ ಆಯಾ ಚಮ್ ಚಮ್ ಚಮ್ ಸೇರಿದಂತೆ ಹಿಂದಿ ಭಾಷೆಯ ಐದು ಸೇರಿ ಒಟ್ಟು 24 ನರ್ಸರಿ ರೈಮ್ಸ್‌ಗಳನ್ನು ಹೇಳುವ ಮೂಲಕ‌ ವಿನೂತನ ದಾಖಲೆಯನ್ನು ಮಾನ್ವಿ ಬರೆದಿದ್ದಾಳೆ. ಅಲ್ಲದೇ, ಕಳೆದ ಬಾರಿ ಆಗಸ್ಟ್‌ನಲ್ಲಿಯೂ ಕರ್ನಾಟಕ ಬುಕ್ ಆಫ್ ಅಚೀವರ್ಸ್ ದಾಖಲೆ ಮಾಡಿರುವುದು ಈ ಮಗುವಿನ ಮತ್ತೊಂದು ಸಾಧನೆಯಾಗಿದೆ.


Spread the love

About Laxminews 24x7

Check Also

ನುಡಿದಂತೆ ನಡೆದ ಎಂಎಲ್ಸಿ ಪ್ರಕಾಶ ಹುಕ್ಕೇರಿ: ಯಡೂರ ಗ್ರಾಮಸ್ಥರ ಮೆಚ್ಚುಗೆ!

Spread the love ನುಡಿದಂತೆ ನಡೆದ ಎಂಎಲ್ಸಿ ಪ್ರಕಾಶ ಹುಕ್ಕೇರಿ: ಯಡೂರ ಗ್ರಾಮಸ್ಥರ ಮೆಚ್ಚುಗೆ! ನುಡಿದಂತೆ ನಡೆದ ಪ್ರಕಾಶ ಹುಕ್ಕೇರಿ; …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ