Breaking News

ಗೋಳಗುಮ್ಮಟ ವೀಕ್ಷಣೆಗೆ ಬಂದ ನಾರಿ ‘ಶಕ್ತಿ’: ಒಂದೇ ದಿನಕ್ಕೆ 5 ಸಾವಿರ ಟಿಕೆಟ್ ಸೇಲ್

Spread the love

ವಿಜಯಪುರ: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಬಸ್​ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ಹಿನ್ನಲೆಯಲ್ಲಿ ಮಹಿಳೆಯರು ಕುಟುಂಬ ಸಮೇತ ಪ್ರವಾಸಿ ತಾಣಗಳತ್ತ ದೌಡಾಯಿಸುತ್ತಿದ್ದಾರೆ.

ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ಭಾನುವಾರ ಮಹಿಳೆಯರ ದಂಡೇ ಹರಿದು ಬಂದಿದೆ. ಇದರಿಂದ ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಜಾ ವೀಕ್ಷಣೆಗೆ ಟಿಕೆಟ್​ಗಾಗಿ ನೂಕುನುಗ್ಗಲು ಉಂಟಾಗಿತ್ತು.

ಬೆಳಗ್ಗೆ 8 ಗಂಟೆಯಿಂದ ಮಹಿಳೆಯರು ತಮ್ಮ ಮಕ್ಕಳ ಜತೆ ಆಗಮಿಸಿ ಗೋಳಗುಮ್ಮಟ ವೀಕ್ಷಣೆ ಮಾಡಲು ಮುಗಿಬಿದ್ದಿದ್ದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸುಮಾರು 5 ಸಾವಿರ ಜನ ಟಿಕೆಟ್ ಪಡೆದು ಗೋಳಗುಮ್ಮಟ ವೀಕ್ಷಣೆ ಮಾಡಿದ್ದಾರೆ. ಭಾನುವಾರ ಸುಮಾರು 1.25 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಕಳೆದ ಐದು ವರ್ಷದಲ್ಲಿ ಒಂದೇ ದಿನ ಇಷ್ಟೊಂದು ಪ್ರವಾಸಿಗರು ಬಂದಿರುವುದು ಇದೇ ಮೊದಲು ಎನ್ನುತ್ತಾರೆ ಪುರಾತತ್ವ ಇಲಾಖೆ ಅಧಿಕಾರಿಗಳು.

ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರ ಪ್ರವಾಸ ಹೆಚ್ಚಳ: ವೀಕೆಂಡ್ ರಜೆ ಇರುವ ಕಾರಣ ದೂರದ ಬೆಂಗಳೂರು, ಮೈಸೂರು, ಕೋಲಾರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯಿಂದ ಮಹಿಳೆಯರು ವಿಜಯಪುರ ಪ್ರವಾಸ ಕೈಗೊಂಡಿದ್ದಾರೆ. ಶಕ್ತಿ ಯೋಜನೆಯಡಿ ಬಸ್​ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇರುವ ಕಾರಣ ವಾರದಿಂದ ಮಹಿಳೆಯರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಹಂಪಿ ಸೇರಿದಂತೆ ನಾನಾ ದೇವಸ್ಥಾನ, ಪ್ರವಾಸಿತಾಣಗಳನ್ನು ವೀಕ್ಷಿಸಿ ಭಾನುವಾರ ವಿಜಯಪುರ ನಗರಕ್ಕೆ ಆಗಮಿಸಿದ್ದರು.


Spread the love

About Laxminews 24x7

Check Also

ನಾನು ಮತ್ತು ಸಿಎಂ ಅಣ್ಣ-ತಮ್ಮಂದಿರಂತೆ ಕೆಲಸ ಮಾಡ್ತೀದ್ದೇವೆ…

Spread the love ನಾನು ಮತ್ತು ಸಿಎಂ ಅಣ್ಣ-ತಮ್ಮಂದಿರಂತೆ ಕೆಲಸ ಮಾಡ್ತೀದ್ದೇವೆ… ಗುಂಪುಗಾರಿಕೆ ನಮ್ಮಲ್ಲಿಲ್ಲ. ಇದು ಕೇವಲ ಮಾಧ್ಯಮಸೃಷ್ಠಿ; ಡಿಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ