Breaking News

ಮಹೇಶ ಫೌಂಡೇಶನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಲ್ಪಟ್ಟು, ತನ್ನ ಸಾಧನೆಗಳ ಮೂಲಕ ನಮ್ಮ ಬೆಳಗಾವಿ ಗೆ ಹೆಮ್ಮೆ ತಂದಿದೆ: ಆಸಿಫ್ ಸೇಠ್

Spread the love

ಮಹೇಶ ಫೌಂಡೇಶನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಲ್ಪಟ್ಟು, ತನ್ನ ಸಾಧನೆಗಳ ಮೂಲಕ ನಮ್ಮ ಬೆಳಗಾವಿ ಗೆ ಹೆಮ್ಮೆ ತಂದಿದೆ. ಮಹೇಶ ಫೌಂಡೇಶನ್ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ನಮ್ಮಂತಹವರು ಮಾಡುವುದಕ್ಕಿಂತ ಹೆಚ್ಚಿನದನ್ನು ಅವರು ಮಾಡುತ್ತಿದ್ದಾರೆ.

ಒಬ್ಬ ಶಾಸಕನಾಗಿ ಮತ್ತು ವೈಯಕ್ತಿಕವಾಗಿ ಮಹೇಶ ಫೌಂಡೇಶನ್ನ ಉದಾರ ಕಾರ್ಯಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸುವ ಭರವಸೆ ನೀಡುತ್ತೇನೆ. ಅಲ್ಲದೆ, ಮಹೇಶ ಫೌಂಡೇಶನ್ ನ ಮುಂದಿನ ಎಲ್ಲ ಕಾರ್ಯಗಳಿಗೆ ಶುಭ ಹಾರೈಸುತ್ತೇನೆ”. ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ರಾಜು ಸೇಠ್ ಅವರು ಬೆಳಗಾವಿಯ ಕಣಬರ್ಗಿಯಲ್ಲಿ ನಡೆದ ಮಹೇಶ ಫೌಂಡೇಶನ್ನ ನೂತನ ಶಾಲೆ ಮತ್ತು ಕೌಶಲ್ಯ ಕೇಂದ್ರದ ಕಟ್ಟಡದ ಮೊದಲ ಮಹಡಿಯ ಮೆಲ್ಚಾವಣಿ ಕಾಮಗಾರಿ ಸಮಾರಂಭದ ಸಂಧರ್ಬದಲ್ಲಿ ಹೇಳಿದರು.

ಮಹೇಶ ಫೌಂಡೇಶನ್ ವೈದ್ಯಕೀಯ ಮತ್ತು ಸೌಲಭ್ಯ ವಂಚಿತ ಮಕ್ಕಳ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿದೆ. ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ, ಮಹೇಶ ಫೌಂಡೇಶನ್ ಸಾವಿರಾರು ಮಕ್ಕಳು ಮತ್ತು ಸೌಲಭ್ಯ ವಂಚಿತರಿಗೆ ಬೆಂಬಲ ನೀಡುತ್ತಿದೆ. ಹೊಸ ಶಾಲೆ ಮತ್ತು ಕೌಶಲ್ಯ ಕೇಂದ್ರವು ಮಹೇಶ ಫೌಂಡೇಶನ್ನ

ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾಗಿದೆ. ಕೆಲ ತಿಂಗಳ ಹಿಂದೆ ಈ ಕಟ್ಟಡ ಆರಂಭವಾಗಿದ್ದು, ಇದೀಗ ಮೊದಲ ಮಹಡಿಯ ಮೆಲ್ಚಾವಣಿ ಕಾಮಗಾರಿ ಹಂತಕ್ಕೆ ತಲುಪಿದೆ. ಈ ಮೆಲ್ಚಾವಣಿ ಕಾಮಗಾರಿ ಸಮಾರಂಭದ ನಿಮಿತ್ತ ರಾಜು ಸೇಠ್ ಮಾನ್ಯ ಶಾಸಕರು, ಬೆಳಗಾವಿ ಉತ್ತರ ಕ್ಷೇತ್ರ ಮತ್ತು ಖ್ಯಾತ ಉದ್ಯಮಿ ಮತ್ತು ಚಲನಚಿತ್ರ ನಟರಾದ ಅಮನ್ ಸೇಠ್ ಅವರು ಮಹೇಶ ಫೌಂಡೇಶನ್ ಗೆ ಭೇಟಿ ನೀಡಿ ಮೆಲ್ಚಾವಣಿ ಕಾಮಗಾರಿ ಉದ್ಘಾಟನೆ ಹಾಗೂ ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು. ಈ ಉದ್ದೇಶಿತ ಶಾಲಾ ಕಟ್ಟಡವು ಮುಂದಿನ ದಿನಗಳಲ್ಲಿ ೫೦೦+ ಸೌಲಭ್ಯ ವಂಚಿತ ಮಕ್ಕಳಿಗೆ ಪ್ರಯೋಜನವನ್ನು ನೀಡುತ್ತದೆ.

ಮೆಲ್ಚಾವಣಿ ಕಾಮಗಾರಿ ಸಮಾರಂಭದ ಸಂದರ್ಭದಲ್ಲಿ ಮಹೇಶ ಫೌಂಡೇಶನ್ ಸಂಸ್ಥಾಪಕರಾದ ಮಹೇಶ ಜಾಧವ ಸಭೆಯನ್ನುದ್ದೇಶಿಸಿ ಮಾತನಾಡಿ “ಹೊಸ ಶಾಲೆ ಮತ್ತು ಕೌಶಲ್ಯ ಕೇಂದ್ರ ಕಟ್ಟಡದ ಪ್ರಗತಿಯನ್ನು ನಾವು ಗುರುತಿಸಿರುವ ಈ ದಿನವು ಒಂದು ಮೈಲಿಗಲ್ಲು. ಮಾನ್ಯ ಶಾಸಕರು ಈ ಸಂದರ್ಭದಲ್ಲಿ ನಮ್ಮ ಜೊತೆಯಿದ್ದು ಮೆಲ್ಚಾವಣಿ ಕಾಮಗಾರಿ ಸಮಾರಂಭವನ್ನು ನೆರವೇರಿಸಿದ್ದು ನಮ್ಮ ಹೆಮ್ಮೆ.

ಶಾಸಕ ಆಸಿಫ್ ಸೇಠ್, ಅಮನ್ ಸೇಠ್ ಮತ್ತು ಅವರ ಕುಟುಂಬವು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಏಕೆಂದರೆ ಅವರು ನಡೆಸುತ್ತಿರುವ ಸಾಮಾಜಿಕ ಚಟುವಟಿಕೆಗಳು ಮತ್ತು ಅವರ ಸಂಸ್ಥೆಗಳು ಸಮಾಜದ ಅನೇಕ ಜನರಿಗೆ ಸಹಾಯ ಮಾಡುತ್ತಿವೆ. ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಗೌರವಿಸಲು ನಾವು ಸಂತೋಷಪಡುತ್ತೇವೆ”. ಎಂದು ಹೇಳಿದರು.


Spread the love

About Laxminews 24x7

Check Also

ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!

Spread the loveಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ