Breaking News

ಕೆಂಪು ಸಮುದ್ರದಲ್ಲಿ ಶಾರ್ಕ್​ ದಾಳಿ ಬಳಿಕ ಮತ್ತೊಂದು ದುರಂತ.. ದೋಣಿಗೆ ಬೆಂಕಿ, ಬ್ರಿಟಿಷ್ ಪ್ರವಾಸಿಗರು ನಾಪತ್ತೆ!

Spread the love

ಕೈರೋ: ಭಾನುವಾರ ಈಜಿಪ್ಟ್‌ನ ಕೆಂಪು ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಬೆಂಕಿ ಹೊತ್ತಿಕೊಂಡಿದೆ. ದೋಣಿಯಲ್ಲಿ ಹಲವಾರು ಬ್ರಿಟಿಷ್ ಪ್ರವಾಸಿಗರು ಪ್ರಯಾಣಿಸುತ್ತಿದ್ದು, ಅವರಲ್ಲಿ ಮೂವರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಸಮುದ್ರದಲ್ಲಿ ಮೂವರು ನಾಪತ್ತೆ: ಈಜಿಪ್ಟಿನ ಕೆಂಪು ಸಮುದ್ರದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಬ್ರಿಟಿಷ್ ಪ್ರವಾಸಿಗರು ನಾಪತ್ತೆಯಾಗಿದ್ದಾರೆ (British tourists missing). ಸುದ್ದಿ ತಿಳಿದಾಕ್ಷಣ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕಾಣೆಯಾದ ಮೂವರು ಪ್ರವಾಸಿಗರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನೆ ನಡೆದಾಗ 15 ಬ್ರಿಟಿಷ್ ಪ್ರವಾಸಿಗರು ಸೇರಿದಂತೆ 27 ಜನರು ಮರ್ಸಾ ಆಲಂ ನಗರದ ಕರಾವಳಿಯಿಂದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿದೇಶಾಂಗ ಕಚೇರಿ ಹೇಳಿದ್ದು ಹೀಗೆ: ದೋಣಿಯಲ್ಲಿ ಪ್ರಯಾಣಿಸುತ್ತಿದ್ದ 15 ಬ್ರಿಟಿಷ್ ಪ್ರವಾಸಿಗರ​ ಪೈಕಿ 12 ಬ್ರಿಟಿಷ್ ಪ್ರವಾಸಿಗರು ಸೇರಿದಂತೆ 24 ಜನರನ್ನು ರಕ್ಷಿಸಲಾಗಿದೆ. ಇತರ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕೆಂಪು ಸಮುದ್ರದಲ್ಲಿ ದೋಣಿ ದುರಂತ ಸಂಭವಿಸಿದೆ. ಮೂವರು ಬ್ರಿಟಿಷ್​ ಪ್ರಯಾಣಿಕರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ವಿದೇಶಾಂಗ ಕಚೇರಿಯ ವಕ್ತಾರರು ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಬ್ರಿಟಿಷ್ ಪ್ರಜೆಗಳಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿದ್ದಾರೆ ಎಂದು ಯುಕೆ ವಿದೇಶಾಂಗ ಕಚೇರಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಾರ್ಕ್​ ದಾಳಿಯಲ್ಲಿ ರಷ್ಯಾ ವ್ಯಕ್ತಿ ಬಲಿ: ರೆಡ್ ಸೀ ರೆಸಾರ್ಟ್ ಹುರ್ಘಡಾ ಕಡಲತೀರದಲ್ಲಿ ಇತ್ತಿಚೇಗೆ ದುರಂತವೊಂದು ಸಂಭವಿಸಿತ್ತು. ಈ ಕರಾವಳಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಟೈಗರ್ ಶಾರ್ಕ್ ದಾಳಿ ಮಾಡಿತ್ತು. ಶಾರ್ಕ್‌ನಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವಾಗ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವ್ಯಕ್ತಿ ಸಾವನ್ನಪ್ಪುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿತ್ತು.

ಟೈಗರ್​ ಶಾರ್ಕ್ ಎಷ್ಟು ಅಪಾಯಕಾರಿ ಎಂದರೆ ನೀರಿನಿಂದ ಹೊರತೆಗೆದ ನಂತರವೂ ಅದು ಮನುಷ್ಯನ ಭಾಗಗಳನ್ನು ಅಗಿಯುವುದನ್ನು ಮುಂದುವರೆಸಿತ್ತು. ಆ ವ್ಯಕ್ತಿಯ ಹೆಸರು ವ್ಲಾಡಿಮಿರ್ ಪೊಪೊವ್. 1999 ರಲ್ಲಿ ಜನಿಸಿದ ವ್ಲಾಡಿಮಿರ್ ಪ್ರವಾಸಿಗರಲ್ಲ, ಆದರೆ ಈಜಿಪ್ಟ್‌ನ ಖಾಯಂ ನಿವಾಸಿ ಆಗಿದ್ದರು. ದಾಳಿಯ ನಂತರ ಶಾರ್ಕ್ ಅನ್ನು ಸೆರೆಹಿಡಿಯಲಾಯಿತು ಮತ್ತು ದಡಕ್ಕೆ ಎಳೆದು ತರಲಾಯಿತು.

ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಈಜಿಪ್ಟ್‌ನ ಪರಿಸರ ಸಚಿವಾಲಯವು ನೀರಿನ ಎಲ್ಲ ಚಟುವಟಿಕೆಗಳನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸಿತ್ತು. ಈ ಪ್ರದೇಶದಲ್ಲಿ ಶಾರ್ಕ್‌ಗೆ ಸಂಬಂಧಿಸಿದ ಘಟನೆ ಇದೇ ಮೊದಲಲ್ಲ. ಜುಲೈ 2022 ರಲ್ಲಿ, ಹುರ್ಘಡಾದಲ್ಲಿ ಶಾರ್ಕ್‌ನಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಈ ಕಡಲ ತೀರ ಬಂದ್​ ಮಾಡಿದ ಕೆಲವೇ ದಿನಗಳಲ್ಲಿ ಈ ದೋಣಿ ದುರಂತದ ಘಟನೆ ಸಂಭವಿಸಿದೆ.

ತನಿಖೆಗೆ ಆದೇಶ: ಈಜಿಪ್ಟ್‌ನ ಪರಿಸರ ಸಚಿವೆ ಯಾಸ್ಮಿನ್ ಫೌದ್ ಅವರು ಘಟನೆಯ ಕುರಿತು ತನಿಖೆ ನಡೆಸಲು ಸಮಿತಿಗೆ ಆದೇಶಿಸಿದ್ದಾರೆ ಎಂದು ಈಜಿಪ್ಟ್‌ನ ಪರಿಸರ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಯಾಸ್ಮೀನ್ ಫೌದ್ ಅವರು ಕೆಂಪು ಸಮುದ್ರದ ಬೀಚ್‌ಗೆ ಹೋಗುವವರಿಗೆ ಅತ್ಯುನ್ನತ ಮಟ್ಟದ ಭದ್ರತೆಯನ್ನು ಜಾರಿಗೆ ತರಲು ಮತ್ತು ಶಾರ್ಕ್ ದಾಳಿಯ ಘಟನೆ ಮತ್ತೆ ಮರುಕಳಿಸುವುದನ್ನು ತಪ್ಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ