Breaking News

ಬಳ್ಳಾರಿ ವಿಮ್ಸ್​ನಲ್ಲಿದೆ ಉದ್ಯೋಗಾವಕಾಶ: ವಾಕ್​-ಇನ್​ನಲ್ಲಿ ನೀವೂ ಭಾಗಿಯಾಗಿ!

Spread the love

ಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ

ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ (ವಿಮ್ಸ್​​) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿದೆ.

ವೈದ್ಯಕೀಯ ಸಂಸ್ಥೆಯಲ್ಲಿ ಖಾಲಿ ಇರುವ ಪ್ರೊಫೆಸರ್​, ಅಸೋಸಿಯೇಟ್​ ಪ್ರೊಫೆಸರ್​, ಮೆಡಿಕಲ್​ ಆಫೀಸರ್​ ಸೇರಿದಂತೆ 93 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಾಕ್​ ಇನ್​ ಇಂಟರ್​ವ್ಯೂ ಮೂಲಕ ಈ ಹುದ್ದೆಗೆ ಆಯ್ಕೆ ನಡೆಯಲಿದೆ ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ.

 ಅಧಿಸೂಚನೆಹುದ್ದೆ ವಿವರ: ಒಟ್ಟು 93 ಹುದ್ದೆಗಳ ಭರ್ತಿಗೆ ಮುಂದಾಗಲಾಗಿದೆ. 7 ಪ್ರೊಫೆಸರ್, 23 ಅಸೋಸಿಯೇಟ್ ಪ್ರೊಫೆಸರ್, 57 ಮೆಡಿಕಲ್ ಆಫೀಸರ್ ಮತ್ತು 6 ಅಪಘಾತ ವೈದ್ಯಕೀಯ ಅಧಿಕಾರಿಗಳ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್​ ಪದವಿ ಮತ್ತು ಡಿಎನ್​ಬಿ ಪೂರ್ಣ ಗೊಳಿಸಿರಬೇಕು.

ವಯೋಮಿತಿ: ಹುದ್ದೆ ಅನುಸಾರವಾಗಿ ವಯೋಮಿತಿ ನಿಗದಿಸಲಾಗಿದೆ. ಪ್ರೊಫೆಸರ್​ ಹುದ್ದೆಗೆ 50 ವರ್ಷ ಅಸೋಸಿಯೇಟ್​ ಫೊಫೆಸರ್​ ಹುದ್ದೆಗೆ 45 ವರ್ಷ ಹುದ್ದೆ ಸಹಾಯಕ ಪ್ರಾಧ್ಯಾಪಕರಿಗೆ 38 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ 2000 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಈ ಅರ್ಜಿ ಶುಲ್ಕವನ್ನು ಡಿಮ್ಯಾಂಡ್​ ಡ್ರಾಫ್ಟ್​ನಲ್ಲಿ ಪಾವತಿಸಬೇಕು.

ಆಫ್​ಲೈನ್​ ಅರ್ಜಿ ಸಲ್ಲಿಸುವ ವಿಳಾಸ : ನಿರ್ದೇಶಕರ ಕಚೇರಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿಮ್ಸ್​​ ಕ್ಯಾಂಪಸ್, ಕಂಟೋನ್ಮೆಂಟ್, ಬಳ್ಳಾರಿ-583104

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್​ ಪಟ್ಟಿ, ಅನುಭವ, ಪಠ್ಯೇತರ, ಎನ್​ಸಿಸಿ ಅಥವಾ ಎನ್​ಎಸ್​ಎಸ್​ ಗ್ರೇಡ್​ ಪ್ರಮಾಣ ಪತ್ರ ಮತ್ತು ಸಂದರ್ಶನದ ಮೂಲಕವಾಗಿ ಆಯ್ಕೆ ಮಾಡಲಾಗುವುದು

ಈ ಹುದ್ದೆಗೆ ಅಭ್ಯರ್ಥಿಗಳು ಆಫ್​ ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಿದ ನಂತರ ಜೂನ್​ 22 ರಂದು ವಾಕ್​ ಇನ್​ ಇಂಟರ್​ವ್ಯೂ ಮೂಲಕ ಅವರ ಆಯ್ಕೆ ನಡೆಯಲಿದೆ. ಬೆಳಗ್ಗೆ 11ರಿಂದ ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳು ಹಾಜರಾಗಿರಬೇಕಿದೆ

ಈ ಹುದ್ದೆಗೆ ಆಫ್​ ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಜೂನ್​ 6ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 19 ಆಗಿದೆ. ಅಭ್ಯರ್ಥಿಗಳು ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ಅರ್ಜಿ ಸಮೂನೆಯಲ್ಲಿ ತಮ್ಮ ವಿವರ, ಶೈಕ್ಷಣಿಕ ಮಾಹಿತಿ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮೇಲಿನ ವಿಳಾಸಕ್ಕೆ ನಿಗದಿತ ಅವಧಿಗೂ ಮುನ್ನ ಸಲ್ಲಿಕೆ ಮಾಡಬೇಕಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ವಿವರವಾದ ಅಧಿಕೃತ ಅಧಿಸೂಚನೆ ವೀಕ್ಷಿಸಲು ಈ vims.karnataka.gov.in ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.


Spread the love

About Laxminews 24x7

Check Also

ಬಜೆಟ್ ನಲ್ಲಿ ಸಾರಿಗೆ ಇಲಾಖೆಗೆ ಸಿಕ್ಕಿದ್ದೇನು?

Spread the loveಶಕ್ತಿ ಯೋಜನೆಗೆ 5,300 ಕೋಟಿ ರೂ. ಸಾರಿಗೆ ಸಿಬ್ಬಂದಿ ವೇತನ ಬಾಕಿ ಪಾವತಿಗೆ 1,271 ಕೋಟಿ ರೂ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ