ಕಾಂಗ್ರೇಸ್ ಸರ್ಕಾರಅಧಿಕಾರಕ್ಕೆ ಬಂದ ಮೇಲೆ ಬೆಳಗಾವಿ ಜಿಲ್ಲೆ ಇಬ್ಬಾಗವಾಗುತ್ತಾ ಎಂಬ ಮಾತು ಈ ಮುನ್ನಲೇಗೆ ಬಂದಿದೆ.
ಬೆಳಗಾವಿ ಜಿಲ್ಲೆ ಅಭಿವೃದ್ದಿಯಾಗಬೇಕಾದರೆ ಇಬ್ಬಾಗವಾಗಬೇಕು ಅಭಿವೃದ್ದಿ ದೃಷ್ಟಿಯಿಂದ ಇಬ್ಬಾಗಬೇಕು
ಎಂದಿದ್ದ ಸತೀಶ ಜಾರಕಿಹೋಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರು ಜಿಲ್ಲೆಯ ಅಭಿವೃದ್ದಿ ಕುರಿತು ಬರಬೇಕು ಹಂತ ಹಂತವಾಗಿ ಚರ್ಚಿಸಿ ಅಭಿವೃದ್ದಿಯ ಪರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿತ್ತುಈ ಹಿನ್ನಲೆಯಲ್ಲಿ ಬೆಳಗಾವಿ ವಿಭಜನೆ ಕೂಗಿಗೆ ಸಚಿವ ಭೈರತಿ ಸುರೇಶ್ ಪ್ರತಿಕ್ರಿಸಿದ್ದುಅಖಂಡ ಕರ್ನಾಟಕವನ್ನು ವಿಭಜನೆ ಮಾಡುವ ಧೈರ್ಯ ಹಾಗೂ ಶಕ್ತಿ ಯಾರಿಗೂ ಇಲ್ಲ, ವಿಭಜಿಸಲು ಸಾಧ್ಯವಿಲ್ಲ.
ಅಖಂಡ ಕರ್ನಾಟಕ ಇದ್ದಂತೆಯೇ ಇರುತ್ತೆ. ಕನ್ನಡ ನಾಡು ಹಾಗೂ ಕರ್ನಾಟಕ ರಾಜ್ಯ ನಮ್ಮದ್ದು ಏನಿದೆಯೋ ಅದೇ ರೀತಿ ಇರುತ್ತೆ. ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ.
ಕರ್ನಾಟಕ ರಾಜ್ಯದ ಪ್ರತಿಯೊಂದು ಮೂಲೆ ನಮ್ಮೆಲ್ಲರಿಗೂ ಸೇರಿದ್ದು. ಕರ್ನಾಟಕ ಅಖಂಡ ಕರ್ನಾಟಕವಾಗಿಯೇ ಇರಬೇಕೆಂಬುದು ನಮ್ಮ ಬಯಕೆ. ಚಿಕ್ಕಮಗಳೂರಿನಲ್ಲಿ ಸಚಿವ ಭೈರತಿ ಸುರೇಶ್ ಹೇಳಿದರು.