Breaking News

ರಸ್ತೆ ಅಪಘಾತ : ಉರುಸ್‌ಗೆ ಹೊರಟಿದ್ದ ಐದು ಜನರು ಸ್ಥಳದಲ್ಲೇ ಸಾವು ; 13 ಜನರಿಗೆ ಗಾಯ.!

Spread the love

ಯಾದಗಿರಿ : ಯಾದಗಿರಿ ತಾಲೂಕಿನ ಚಕ್ರ ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 150(a)ರಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಕ್ರೂಸರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.

ಈ ದುರ್ಘಟನೆಯಲ್ಲಿ ಮೂರು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, ಒಟ್ಟಾರೆ 13 ಜನರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.

ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಿಂದ ಕ್ರೂಸರ್​ ವಾಹನವು ಗುಲ್ಬರ್ಗಾ ಕಡೆಗೆ ತೆರಳುತ್ತಿತ್ತು. ವಾಹನದಲ್ಲಿ ಒರೋಬ್ಬರಿ 23 ಜನರನ್ನು ತುಂಬಿಕೊಂಡು ಗುಲ್ಬರ್ಗಾದ ಕಾಜೆ ಬಂದೇ ನವಾಜ್ ದರ್ಗಾ ಊರುಸಿಗೆ ಹೋಗುತ್ತಿದ್ದರು.ಆದರೆ ಈ ವೇಳೆ ಕ್ರೂಜರ್ ಗಾಡಿಯು ನಿಲ್ಲಿಸಿದ್ದ ಲಾರಿಗೆ ಹಿಂದುಗಡೆಯಿಂದ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ

ಮೃತರು ಆಂಧ್ರ ಜಿಲ್ಲೆಯ ನಂದ್ಯಾಲ ಜಿಲ್ಲೆಯ ವೆಲ್ ಗೋಡ್ ಗ್ರಾಮದವರಾಗಿದ್ದು, ಮುನೀರ್ (40), ನಯಾಮತ್ (40) ಮುದಶಿರ್ (12) ರಮೀಜಾ ಬೇಗಂ (50) ಸುಮ್ಮಿ (12) ಮೃತ ದುರ್ದೈವಿಗಳು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ