Breaking News

40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್​ ಬರ್ಬರ ಕೊಲೆ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸಹಚರರ ಕೃತ್ಯ

Spread the love

ಬೆಂಗಳೂರು: ನಗರದ ಮಹದೇವಪುರದಲ್ಲಿ ಮೇ 25ರಂದು ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ರೇಣುಕುಮಾರ್ ಹತ್ಯೆಯ ದೃಶ್ಯ ವೈರಲ್​ ಆಗುತ್ತಿದೆ(Murder). ಸಿಸಿಟಿವಿಯಲ್ಲಿ ರೆಕಾರ್ಡ್​ ಆದ ಹತ್ಯೆಯ ದೃಶ್ಯಗಳು ಎಂತವರನ್ನೂ ಬೆಚ್ಚಿಬೀಳಿಸುವಂತಿವೆ. ರೇಣುಕುಮಾರ್(​Rowdy Sheeter Renukumar)  ಸಹಚರರಾದ ಶ್ರೀಕಾಂತ್ ಹಾಗೂ ಪ್ರಶಾಂತ್ ಇಬ್ಬರು ಸೇರಿಕೊಂಡು ಹತ್ಯೆ ಮಾಡಿದ್ದರು. 40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್​ ಬರ್ಬರ ಕೊಲೆ ಮಾಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಧಮ್ಕಿ ಹಾಕಿದ ಎಂಬ ಕಾರಣಕ್ಕೆ ಕೊಲೆ

ಈ ಹಿಂದೆ ಜೈಲಿನಿಂದ ಹೊರಬಂದ ರೇಣುಕುಮಾರ್​​ ತನ್ನ ಸಹಚರರಿಗೆ ಧಮ್ಕಿ ಹಾಕಿದ್ದ. ನಾನು ಜೈಲಿನಲ್ಲಿದ್ದಾಗ ಏರಿಯಾದಲ್ಲಿ ನಿಮ್ಮ ಹವಾ ಜಾಸ್ತಿಯಾಗಿದೆ. ನೀವು ನನ್ನ ಶಿಷ್ಯಂದಿರು, ಇನ್ಮುಂದೆ ಏನು ಮಾಡಬೇಕಾದರೂ ನನ್ನ ಪರ್ಮಿಷನ್​ ತೆಗೆದುಕೊಳ್ಳಬೇಕೆಂದು ಪ್ರಶಾಂತ್, ಶ್ರೀಕಾಂತ್​ಗೆ ಧಮ್ಕಿ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಸಹಕರರು ಪ್ಲಾನ್ ಮಾಡಿ ಅಟ್ಯಾಕ್ ಮಾಡಿದ್ದಾರೆ. ಕೇವಲ 40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ