Breaking News

ಶವಗಳ ರಾಶಿಯಿಂದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ

Spread the love

ಅಲ್ಲಿ ಹೆಣಗಳ ರಾಶಿ, ಎಲ್ಲಾ ಪೋಷಕರು, ಸಂಬಂಧಿಕರು ಮೂಗು ಮುಚ್ಚಿಕೊಂಡು ತಮ್ಮವರ ಹುಡುಕಾಟದಲ್ಲಿ ತೊಡಗಿದ್ದರು. ಆಗಲೇ ಅಪಘಾತ ಸಂಭವಿಸಿ ಹಲವು ಕಳೆದೇ ಬಿಟ್ಟಿತ್ತು.

ಅಲ್ಲಿ ಹೆಣಗಳ ರಾಶಿ, ಎಲ್ಲಾ ಪೋಷಕರು, ಸಂಬಂಧಿಕರು ಮೂಗು ಮುಚ್ಚಿಕೊಂಡು ತಮ್ಮವರ ಹುಡುಕಾಟದಲ್ಲಿ ತೊಡಗಿದ್ದರು. ಆಗಲೇ ಅಪಘಾತ ಸಂಭವಿಸಿ ಹಲವು ಕಳೆದೇ ಬಿಟ್ಟಿತ್ತು. ತಮ್ಮವರು ಬದುಕಿರುವುದು ಹಾಗಿರಲಿ ಗುರುತು ಸಿಕ್ಕಿದರೆ ಸಾಕಪ್ಪಾ ಎನ್ನುವಂತಿದ್ದವು ಸಂಬಂಧಿಕರ ಕಣ್ಣುಗಳು. ಒಂದೆಡೆ ತಮ್ಮವರ ಹುಡುಕಾಡಿ ಹುಡುಕಾಡಿ ಕಣ್ಣೀರು ಬತ್ತಿ ಹೋಗಿವೆ, ಕಣ್ಣುಗಳು ಮಂಜಾಗುತ್ತಿವೆ, ಇನ್ನೊಂದೆಡೆ ಶವಗಳಿಂದ ಬರುತ್ತಿದ್ದ ದುರ್ನಾತ, ಎಲ್ಲವನ್ನೂ ಸಹಿಸಿಕೊಂಡು ಜನರು ತಮ್ಮವರ ಹುಡುಕಾಟದಲ್ಲಿ ತೊಡಗಿದ್ದರು.

ಹಾಗೆಯೇ ತಂದೆಯೊಬ್ಬರು ತನ್ನ ಮಗ ಸತ್ತಿದ್ದಾನೆ ಎಂದು ನಂಬಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು, ಆದರೆ ಅಲ್ಲಿದ್ದವರು ಆತ ದುಃಖದಲ್ಲಿ ಹಾಗೆ ಹೇಳುತ್ತಿರಬಹುದು ಎಂದುಕೊಂಡಿದ್ದಾರೆ. ಆದರೆ ಅವರ ನಂಬಿಕೆ ನಿಜವಾಯಿತು ಆ ಶವಗಳ ಮಧ್ಯೆ ಮಗನನ್ನು ಜೀವಂತವಾಗಿ ಹೊರತೆಗೆದಿದ್ದಾರೆ.

ಬಾಲಾಸೋರ್​ನ ಶಾಲೆಯೊಂದನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿದೆ. ಬಿಸ್ವಜಿತ್ ಮಲಿಕ್ ಅವರ ತಂದೆ ತಕ್ಷಣವೇ ಆಂಬ್ಯುಲೆನ್ಸ್‌ನಲ್ಲಿ 230 ಕಿಮೀ ದೂರದಲ್ಲಿರುವ ಮಗನನ್ನು ಹುಡುಕಲು ಬಂದಿದ್ದರು. ಅವರು ತಮ್ಮ ಮಗನನ್ನು ಶವಾಗಾರದಿಂದ ಹೊರತೆಗೆದು ಆಸ್ಪತ್ರೆಗೆ ಸೇರಿಸಿದರು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ