ಕಾಂಗ್ರೆಸ್ ಪಕ್ಷದವರು ಕೋಳಕು ಬುದ್ದಿಯವರು ಇದ್ದಾರೆ ಎಂದು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಹೇಳಿದರು.ಅವರು ಇಂದು ಹುಕ್ಕೇರಿ ನಗರದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷದವರು ಗೋಹತ್ಯೆ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ವಿಚಾರ ಮಾಡುತ್ತಿರುವದು ಹಾಸ್ಯಾಸ್ಪದವಾಗಿದೆ, ಇತ್ತೀಚೆಗೆ ವಿಧಾನಸೌಧದ ಸುತ್ತಲು ಗೋಮೂತ್ರ ಸಿಂಪಡಿಸುವ ಮೂಲಕ ಶುಧ್ಧಿಕರಣ ಮಾಡಿದ್ದಾರೆ ಈಗ ಅದೆ ಗೋವನ್ನು ಹತ್ಯೆ ಮಾಡಲು ಹೋರಟಿರುವ ಕಾಂಗ್ರೆಸ್ ಪಕ್ಷದವರು ಕೋಳಕು ಬುದ್ದಿಯವರು ಎಂದು, ನಾವು ಹಿಂದೂಗಳು ಯಾವದೇ ಪರಿಸ್ಥಿತಿಯಲ್ಲಿ ಗೋಹತ್ಯೆ ಕಾಯ್ದೆ ಹಿಂಪಡೆಯಲು ಬಿಡುವದಿಲ್ಲಾ ಎಂದರು
ಅದೆ ರೀತಿ ಓಡಿಸ್ಸಾ ರಾಜ್ಯದಲ್ಲಿ ರೈಲು ಅಪಘಾತ ವಾಗಿದ್ದು ಮಾಲ್ ಫಂಕ್ಷಣ ಎಂದು ತಿಳಿದು ಬಂದಿದೆ ಆ ಕುರಿತು ಸಿ ಬಿ ಐ ತನಿಖೆ ನಡೆಸುತ್ತದೆ ಆದರೆ ಕಾಂಗ್ರೆಸ್ ಪಕ್ಷದ ಮುಖಂಡ ರಾವುಲ್ ಗಾಂಧಿ ಕೇಂದ್ರ ರೈಲ್ವೇ ಸಚಿವರು ರಾಜಿನಾಮೆ ನೀಡಬೇಕು ಎಂದು ಹೆಳುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದರು.
ನಂತರ ಗಾಂಧಿ ನಗರ ಸರಕಾರಿ ಕನ್ನಡ ಮತ್ತು ಉರ್ದು ಶಾಲೆಯಲ್ಲಿ ಮಕ್ಕಳೊಂದಿಗೆ ಮೌನಾಚಾರಣೆ ಮಾಡುವ ಮೂಲಕ ಓಡಿಸ್ಸಾ ರೈಲು ಅಪಘಾತದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭದಲ್ಲಿ ಹುಕ್ಕೇರಿಇಓ ಉಮೇಶ್ ಸಿದ್ನಾಳ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಮಹಾದೇವ ಪಟಗುಂದಿ, ರೈತ ಸಂಪರ್ಕ ಕೇಂದ್ರ ಅಧಿಕಾರಿ ಶಿವಾನಂದ ಕಮತ,ನಾಂದಣಿ, ರಾಘವೇಂದ್ರ ತಳವಾರ, ತಾಂತ್ರಿಕ ಅಧಿಕಾರಿ ಪುರಷೋತ್ತಮ, ಉದಯ ಆಗನೂರ, ದೋಡಮನಿ, ರೈತ ಮುಖಂಡರಾದ ಸತ್ತೆಪ್ಪಾ ನಾಯಿಕ, ಪರಗೌಡಾ ಪಾಟೀಲ, ಬಿ ಇ ಓ ಮೋಹನ ದಂಡಿನ ಉರ್ದು ಪ್ರೌಢ ಎಸ್ ಡಿ ಎಮ್ ಸಿ ಅದ್ಯಕ್ಷ ರಿಯಾಜ್ ಮುಲ್ಲಾ, ರಾಜು ಕುರಂದವಾಡೆ, ರಾಜು ಮೋಮಿನದಾದಾ, ಕಲ್ಪಣಾ ಲೊಖಂಡೆ ಮೊದಲಾದವರು ಉಪಸ್ಥಿತರಿದ್ದರು.