Breaking News

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ವಿವರ ಜಾರಿ

Spread the love

ಬೆಂಗಳೂರು – ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ವಿವರ ನೀಡಿದೆ. ಎಲ್ಲಾ ಗ್ಯಾಂರಟಿ ಯೋಜನೆಗಳು ಇದೇ ವರ್ಷ ಜಾರಿಯಾಗಲಿದೆ ಎಂದು ಸರಕಾರ ತಿಳಿಸಿದೆ.

ಸಚಿವಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಕುರಿತು ಮಾಹಿತಿ ನೀಡಿದ್ದಾರೆ.

ಗೃಹ ಜ್ಯೋತಿ ಅಡಿ ವಿದ್ಯುತ್ ಬಳಕೆಯ 12 ತಿಂಗಳ ಸರಾಸರಿ ಆಧಾರದ ಮೇಲೆ ಶೇ.10ರಷ್ಟು ಹೆಚ್ಚು ಸೇರಿಸಿ ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು. ಜುಲೈ 1ರಿಂದ ಈ ಯೋಜನೆ ಜಾರಿಯಾಗಲಿದೆ.

ಶಕ್ತಿ ಯೋಜನೆಯಡಿ ರಾಜ್ಯದ ಒಳಗಡೆ ಎಸಿ ಮತ್ತು ಲಕ್ಸುರಿ ಹೊರತಾದ ಬಸ್ ಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ. 

ಜೂನ್ 11ರಿಂದಲೇ ಇದು ಜಾರಿಯಾಗಲಿದ್ದು,  ನನ್ನ ಹೆಂಡತಿಗೂ ಬಸ್ ನಲ್ಲಿ ಉಚಿತ ಪ್ರಯಾಣವಿರಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಯುವನಿಧಿ ಅಡಿ  2022 – 23ರಲ್ಲಿ ಉತ್ತೀರ್ಣರಾಗುವ ಎಲ್ಲ ಪದವೀಧರರಿಗೆ/ ಡಿಪ್ಲೋಮಾ ಪಡೆದವರಿಗೆ ಮುಂದಿನ 24 ತಿಂಗಳು ಯುವನಿಧಿ ಅಡಿಯಲ್ಲಿ ಪ್ರತಿ ತಿಂಗಳ 3 ಸಾವಿರ/1500 ರೂ. ನೀಡಲಾಗುವುದು.

ಜುಲೈ 1ರಿಂದ ಪ್ರತಿಯೊಬ್ಬರಿಗೂ 10 ಕಿಲೋ ಅಕ್ಕಿ ನೀಡಲಾಗುತ್ತದೆ

ಗೃಹ ಲಕ್ಷ್ಮೀ ಯೋಜನೆಯಡಿ ಅರ್ಜಿ ಕರೆಯಲಾಗುತ್ತದೆ. ಮನೆಯವರೇ ಯಜಮಾನಿಯನ್ನು ಗುರುತಿಸಿ ಅರ್ಜಿ ಹಾಕಬೇಕಾಗುತ್ತದೆ ಎಂದು ಅವರು ವಿವರಿಸಿದರು.

ನಾವು ನುಡಿದಂತೆ ನಡೆದವರು. ಹಿಂದೆಯೂ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೇವೆ. ಬಿಜೆಪಿಯವರು ಯಾವುದೇ ಭರಸೆ ಈಡೇರಿಸದೆ ಮಾತನಾಡುವ ಏನು ಹಕ್ಕಿದೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಪ್ರಶ್ನಿಸಿದರು.


Spread the love

About Laxminews 24x7

Check Also

ಇಡೀ ದಿನ ಕ್ಷೇತ್ರ ಸುತ್ತಿ ಸಾರ್ವಜನಿಕರ ಸಮಸ್ಯೆ ಜತೆಗೆ ಬೆಳೆ ಹಾನಿ ಸಮೀಕ್ಷೆ ನಡೆಸಿದ- ಸಚಿವ ಸಂತೋಷ ಲಾಡ್.

Spread the love ಇಡೀ ದಿನ ಕ್ಷೇತ್ರ ಸುತ್ತಿ ಸಾರ್ವಜನಿಕರ ಸಮಸ್ಯೆ ಜತೆಗೆ ಬೆಳೆ ಹಾನಿ ಸಮೀಕ್ಷೆ ನಡೆಸಿದ- ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ