Breaking News

ಮಲಪ್ರಭಾ ನದಿ ತಟದಲ್ಲಿ ಸ್ವಚ್ಚತಾ ಕಾರ್ಯಕೈಗೊಂಡ ಸ್ವಯಂ ಸೇವಕರು

Spread the love

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ನದಿ ದಡದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಬೆಳಗಾವಿ ಘಟಕದ ಸ್ವಯಂ ಸೇವಕರಿಂದ ಭಾನುವಾರ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು.

ಮಲಪ್ರಭಾ ನದಿ ದಡದಲ್ಲಿ ಹಾಗೂ ಶರಣೆ ಗಂಗಾಂಬಿಕಾ ಐಕ್ಯಮಂಟಪದ ಬಳಿ ಸ್ವಯಂ ಸೇವಕರು ಸ್ವಚ್ಚತಾ ಕಾರ್ಯಕೈಗೊಂಡರು.

ನದಿ ತೀರದ ಗೋಡೆಯ ಮೇಲೆ ನದಿಯ ನೀರಿನ ಸಮರ್ಪಕ ಬಳಕೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಲು ಪ್ರೇರಣೆ ನೀಡುವ ಬರಹಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸಿದರು. ಸ್ವಯಂ ಸೇವಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸುಮಾರು 60ಕ್ಕೂ ಅಧಿಕ ಸ್ವಯಂ ಸೇವಕರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಸಂಯೋಜಕ ಸಂತೋಷ ಖೋತ ಕಾರ್ಯಕ್ರಮದ ನೇತೃತ್ವ

ವಹಿಸಿದ್ದರು. ಸ್ವಯಂ ಸೇವಕರಾದ ಸೌರಭ್, ರೋಸ್, ನೀಲಾ, ಹರ್ಷಿತಾ, ಗಣೇಶ, ಶಂಕರ, ಈರಣ್ಣ, ಅಭಿಷೇಕ, ವಿನೀತ, ದಿವ್ಯಾ, ಯಲ್ಲಪ್ಪ, ಕಾಶವ್ವ ಇತರರು ಭಾಗಿಯಾಗಿದ್ದರು.

 1mkh1 ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ನದಿ ತೀರದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಬೆಳಗಾವಿ ಘಟಕದ ಸ್ವಯಂ ಸೇವಕರಿಂದ ಭಾನುವಾರ ಸ್ವಚ್ಚತಾ ಕಾರ್ಯಕೈಗೊಳ್ಳಲಾಯಿತು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ