Breaking News

ಕಾಮಗಾರಿ ಮುಗಿದು ಐದು ವರ್ಷ ಕಳೆದರೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ.

Spread the love

ಬೆಳಗಾವಿ: ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅಧಿಕಾರವಧಿಯಲ್ಲಿ ಇಲ್ಲಿನ ಅಶೋಕ ನಗರದಲ್ಲಿ ನಿರ್ಮಾಣಗೊಂಡಿದ್ದ ಕ್ರೀಡಾ ಸಂಕೀರ್ಣಕ್ಕೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕಾಮಗಾರಿ ಮುಗಿದು ಐದು ವರ್ಷ ಕಳೆದರೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ.

 

ಈಗ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಿದ್ದು, ಈಗಲಾದರೂ ಅದು ಬಳಕೆಯಾಗುವುದೇ? ಅಥವಾ ನಿಷ್ಪ್ರಯೋಜಕವಾಗಿಯೇ ಉಳಿಯುವುದೇ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಕಾಂಗ್ರೆಸ್‌ನ ಫಿರೋಜ್‌ ಸೇಠ್‌ ಉತ್ತರ ಕ್ಷೇತ್ರದ ಶಾಸಕರಾಗಿದ್ದಾಗ ಮಹಾನಗರ ಪಾಲಿಕೆ ₹6 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಿತ್ತು. 2018ರ ಮಾರ್ಚ್‌ನಲ್ಲಿ ಫಿರೋಜ್‌ ಬ್ಯಾಡ್ಮಿಂಟನ್‌ ಹಾಲ್‌ ಉದ್ಘಾಟಿಸಿದ್ದರು. ನಂತರ ಈ ಕ್ಷೇತ್ರದಿಂದ ಬಿಜೆಪಿಯ ಅನಿಲ ಬೆನಕೆ ಶಾಸಕರಾಗಿ ಆಯ್ಕೆಯಾದರು. ಇದೇ ಆವರಣದಲ್ಲಿ ನಡೆದ ಈಜುಕೊಳ, ವ್ಯಾಯಾಮ ಶಾಲೆ ಕಾಮಗಾರಿಗಳನ್ನು 2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು. ಆದರೆ, ಇವೆಲ್ಲ ಕ್ರೀಡಾ ಸೌಕರ್ಯಗಳನ್ನು ಈವರೆಗೂ ಬಳಕೆ ಮಾಡದಿರುವುದಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ.

ತುಕ್ಕು ಹಿಡಿಯುತ್ತಿವೆ ಸಲಕರಣೆ: ನಗರದ ವಿವಿಧ ಬಡಾವಣೆಗಳ ಮಕ್ಕಳು, ಯುವಕ-ಯುವತಿಯರು ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ಸರ್ಕಾರ ಕಲ್ಪಿಸಿದ ಸೌಲಭ್ಯಗಳನ್ನು ಬಳಕೆಗೆ ಮುಕ್ತಗೊಳಿಸಿದ್ದರೆ ಅನುಕೂಲವಾಗುತ್ತಿತ್ತು. ವ್ಯಾಯಾಮ ಮತ್ತು ಈಜಿಗಾಗಿ ಖಾಸಗಿಯವರನ್ನು ಅವಲಂಬಿಸುವುದು ತಪ್ಪುತ್ತಿತ್ತು. ಆದರೆ, ಪಾಲಿಕೆ ನಿರ್ಲಕ್ಷ್ಯದಿಂದಾಗಿ ಕ್ರೀಡಾ ಸಂಕೀರ್ಣ ಇದ್ದೂ ಇಲ್ಲದಂತಾಗಿದೆ. ಐದು ವರ್ಷಗಳಿಂದ ಉಪಯೋಗಿಸದ ಕಾರಣ, ವಿವಿಧ ಕ್ರೀಡಾ ಸಲಕರಣೆಗಳು ಹಾಳಾಗುತ್ತಿವೆ.

-ರುದ್ರೇಶ ಘಾಳಿ, ಆಯುಕ್ತ ಮಹಾನಗರ ಪಾಲಿಕೆಕ್ರೀಡಾ ಸಂಕೀರ್ಣದ ನಿರ್ವಹಣೆಯನ್ನು ಒಂದು ಏಜೆನ್ಸಿಗೆ ಕೊಟ್ಟಿದ್ದೆ‌ವು. ಈಗ ಅದು ರದ್ದಾಗಿದೆ. ಕೂಡಲೇ ಟೆಂಡರ್‌ ಪ್ರಕ್ರಿಯೆ ನಡೆಸಿ ಈ ಕ್ರೀಡಾ ಸೌಕರ್ಯಗಳನ್ನು ಜನರ ಬಳಕೆಗೆ ಮುಕ್ತಗೊಳಿಸುತ್ತೇವೆ‘ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಕ್ರೀಡಾ ಸಂಕೀರ್ಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರಿದೆ. ನೂತನ ಶಾಸಕ ಆಸೀಫ್‌(ರಾಜು) ಸೇಠ್‌ ಅವರಾದರೂ ಇದನ್ನು ಬಳಕೆಗೆ ಮುಕ್ತಗೊಳಿಸುತ್ತಾರೆಯೇ ಎಂದು ಕಾಯುತ್ತಿದ್ದೇವೆ’ ಎಂದು ಸ್ಥಳೀಯರಾದ ಎಸ್‌.ಎಸ್‌.ಬಸವರಾಜ ತಿಳಿಸಿದರು.

-ಆಸೀಫ್‌(ರಾಜು) ಸೇಠ್‌, ಶಾಸಕಅಶೋಕ ನಗರದ ಕ್ರೀಡಾ ಸಂಕೀರ್ಣವನ್ನು ಸಮರ್ಪಕವಾಗಿ ಬಳಕೆ ಮಾಡುವ ಸಂಬಂಧ ಕ್ರಮ ವಹಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ‘ಕ್ರೀಡಾ ಸಂಕೀರ್ಣದಲ್ಲಿರುವ ಸಲಕರಣೆಗಳೆಲ್ಲ ತುಕ್ಕು ಹಿಡಿಯುತ್ತಿವೆ. ಸಂಜೆ ಅಲ್ಲಿ ಕ್ರಮ ಚಟುವಟಿಕೆಗಳೂ ನಡೆಯುತ್ತಿವೆ. ತ್ವರಿತವಾಗಿ ಇದನ್ನು ಬಳಕೆಗೆ ಮುಕ್ತಗೊಳಿಸಿ, ಕ್ರೀಡಾಸಕ್ತರಿಗೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಕ್ರೀಡಾಪಟು ಉದಯ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ