ಶಿರಸಿ: ಇಲ್ಲಿನ ಕುಮಟಾ ರಸ್ತೆಯ ಬೆಣ್ಣೆಹೊಳೆ ಬಳಿ ಕೆಎಸ್‌ಆರ್ ಟಿಸಿ ಬಸ್ ಮತ್ತು ಕಾರ್ ನಡುವೆ ಬುಧವಾರ ಮಧ್ಯಾಹ್ನ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದವರು ಹಾಗೂ ಬಸ್ ನಲ್ಲಿದ್ದವರು ಎಲ್ಲರೂ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.
ಬಸ್ ಭಟ್ಕಳದಿಂದ ಗೋಕಾಕ ಕಡೆ ಸಾಗುತ್ತಿತ್ತು. ಕಾರು ಗುಜರಾತ್ ಮೂಲದ ಕುಟುಂಬಕ್ಕೆ ಸೇರಿದೆ.
ಅಪಘಾತ ಸಂಭವಿಸಿದ ವೇಳೆ ಸ್ಥಳದಲ್ಲಿದ್ದ ಆರ್ ಎನ್ ಎಸ್ ಕಂಪನಿಯ ಗೋವಿಂದ ಭಟ್ ಅವರು ಪೋಲೀಸರಿಗೆ ಮಾಹಿತಿ ನೀಡಿದರಲ್ಲದೆ ವಾಹನ ತೆರವಿಗೆ ಸಹಕರಿಸಿದರು.
Laxmi News 24×7