Breaking News

ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಮಹಿಳೆ ಬಿಸಿ ನೀರು ಎರಚಿ ಹಲ್ಲೆ

Spread the love

ಬೆಂಗಳೂರು : ಬೆಂಗಳೂರು ಜಿಲ್ಲೆಯ ಚಾಮರಾಜಪೇಟೆಯಲ್ಲಿ ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಮಹಿಳೆ ಬಿಸಿ ನೀರು ಎರಚಿ ಹಲ್ಲೆ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ ಮೂಲದ ಮಹಿಳೆ ಇಂತಹ ಕೃತ್ಯವೆಸಗಿದ್ದಾಳೆ ಎಂದು ತಿಳಿದುಬಂದಿದೆ.

ಕೆಲವು ದಿನಗಳಿಂದ ಭೀಮಾಶಂಕರ ಮತ್ತು ಮಹಿಳೆ ಪ್ರೀತಿಸುತ್ತಿದ್ದರು. ಆಬಳಿಕ ಮಹಿಳೆಗೆ ಮೊದಲೇ ಮದುವೆಯಾಗಿದೆ ಎಂದು ಗೊತ್ತಾಗಿದೆ. ಈ ಕಾರಣದಿಂದಾಗಿ ಮಹಿಳೆಯಿಂದ ಅಂತರ ಕಾಯ್ದುಕೊಳ್ಳಲು ಭೀಮಾಶಂಕರ ಮುಂದಾಗಿದ್ದಾನೆ

ಅಲ್ಲದೇ ತಾನು ವಾಸವಾಗಿದ್ದ ಬಾಡಿಗೆ ರೂಮ್ ಅನ್ನು ಮಹಿಳೆಗೆ ಬಿಟ್ಟು ಕೊಟ್ಟಿದ್ದಾನೆ. ಈ ನಡುವೆ ಬೇರೆ ಯುವತಿಯೊಂದಿಗೆ ಭೀಮಾಶಂಕರನಿಗೆ ಮದುವೆ ಗೊತ್ತಾಗಿದೆ. ಊರಲ್ಲಿ ಮದುವೆಯಾಗಿ ಭೀಮಾಶಂಕರ ಪುನಃ ಬೆಂಗಳೂರಿಗೆ ಬಂದಿದ್ದಾನೆ.ಮೇ 25 ರಂದು ಸಂಜೆ ಮಾತನಾಡಬೇಕಿದೆ ಎಂದು ಮಹಿಳೆ ಆತನನ್ನು ರೂಮಿಗೆ ಕರೆಸಿಕೊಂಡಿದ್ದಾಳೆ.‌ ಮಹಿಳೆ ಬಳಿ ಮದುವೆಯಾದ ವಿಚಾರವನ್ನು ಭೀಮಾಶಂಕರ ಪ್ರಸ್ತಾಪಿಸಿದ್ದಾನೆ. ಸೈಲೆಂಟಾಗಿ ಬಿಸಿ ನೀರು ಕಾಯಿಸಿದ ಮಹಿಳೆ ಆತನಿಗೆ ಗೊತ್ತಾಗದಂತೆ ಮುಖಕ್ಕೆ ಬಿಸಿ ನೀರು ಎರಚಿದ್ದಾಳೆ. ಬಿಯರ್ ಬಾಟಲಿಯಿಂದ ಮುಖಕ್ಕೆ ಹೊಡೆದು ರೂಮ್ ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾಳೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ