Breaking News

ಜಾರಕಿಹೊಳಿ ಕುಟುಂಬಕ್ಕೆ ಮತ್ತೆ ಪವರ್

Spread the love

ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಎನ್ನುವ ಹೆಸರು ಚಿರಪರಿಚಿತ. ಸರ್ಕಾರವನ್ನ ಹುಟ್ಟು ಹಾಕುವ, ಸರ್ಕಾರವನ್ನ ಬೀಳಿಸುವ ಶಕ್ತಿ ಈ ಕುಟುಂಬಕ್ಕಿದೆ ಎನ್ನುವುದದು ಎರಡು ಬಾರಿ ಸಾಬೀತಾಗಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ (Jarkiholi Family) ಎನ್ನುವ ಹೆಸರು ಚಿರಪರಿಚಿತ. ಸರ್ಕಾರವನ್ನ ಹುಟ್ಟು ಹಾಕುವ, ಸರ್ಕಾರವನ್ನ ಬೀಳಿಸುವ ಶಕ್ತಿ ಈ ಕುಟುಂಬಕ್ಕಿದೆ ಎನ್ನುವುದದು ಎರಡು ಬಾರಿ ಸಾಬೀತಾಗಿದೆ.

ಇಷ್ಟೊಂದು ಪವರ್ ಫುಲ್ ಇರುವ ಈ ಕುಟುಂಬ ಯಾವ ಪಕ್ಷ ಸರ್ಕಾರಕ್ಕೆ ಬಂದ್ರೂ ಹಿಡಿತ ಇರುತ್ತೆ ಎನ್ನುವುದಕ್ಕೆ ಇಂದಿಗೂ ಸಾಬೀತು ಮಾಡಿದೆ. 

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಛಾಪು ಮೂಡಿಸಿ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಜಾರಕಿಹೊಳಿ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಅಧಿಕಾರ ಒಲಿದು ಬಂದಿದೆ. ಲಾಬಿ ಮಾಡದೆ ಮನೆಯಲ್ಲಿದ್ದರೂ ಸಚಿವ ಸ್ಥಾನ ಮನೆಗೆ ಹುಡುಕಿಕೊಂಡು ಬಂದಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಸಿರುವ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಮಿನಿಸ್ಟರ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಷ್ಟೇ ಅಲ್ಲ.. ರಾಜ್ಯ ಮಟ್ಟದಲ್ಲೂ ಜಾರಕಿಹೊಳಿ ಕುಟುಂಬ ಹೆಸ್ರು ಮಾಡಿದೆ.

ಈ ಕುಟುಂಬದ ಐದು ಜನ ಅಣ್ತಮ್ಮಂದಿರ ಪೈಕಿ ನಾಲ್ವರು ಬ್ರದರ್ಸ್ ಒಂದೊಂದು ಸ್ಥಾನದಲ್ಲಿದ್ದಾರೆ.

ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಶಾಸಕರಾಗಿ ಆಯ್ಕೆಯಾಗಿದ್ರೆ, ಲಖನ್ ಜಾರಕಿಹೊಳಿ ಎಂಎಲ್ಸಿ ಆಗಿದ್ದಾರೆ. ಈ ನಾಲ್ವರ ಪೈಕಿ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಸರ್ಕಾರದಲ್ಲಿ ಮಿನಿಸ್ಟರ್ ಆಗಿದ್ದಾರೆ.

ಈ ಮೂಲಕ ಯಾವುದೇ ಸರ್ಕಾರ ಬಂದ್ರೂ ಅದ್ರಲ್ಲಿ ಜಾರಕಿಹೊಳಿ ಕುಟುಂಬದ ಓರ್ವ ಸದಸ್ಯ ಇರುತ್ತಾರೆ ಎನ್ನುವುದು ಮತ್ತೆರುಜುವಾಗಿದೆ


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ