Breaking News

ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡು 29 ವರ್ಷ.. ಅವಿಸ್ಮರಣೀಯ ಕ್ಷಣ ನೆನಪಿಸಿಕೊಂಡ ಸುಶ್ಮಿತಾ ಸೇನ್‌

Spread the love

ಮುಂಬೈ(ಮಹಾರಾಷ್ಟ): 29 ವರ್ಷಗಳ ಹಿಂದೆ ಇದೇ ದಿನಾಂಕದಂದು ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದ ನಟಿ ಸುಶ್ಮಿತಾ ಸೇನ್ ಅವರ ಜೀವನದಲ್ಲಿ ಮೇ 21 ಬಹಳ ವಿಶೇಷವಾದ ದಿನವಾಗಿದೆ.

ಈ ಕಾರಣದಿಂದಾಗಿ, ಭಾನುವಾರ ಬೆಳಗ್ಗೆ, ನಟಿ ತಮ್ಮ ಅವಿಸ್ಮರಣೀಯ ಕ್ಷಣ ನೆನಪಿಸಿಕೊಂಡು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರ ಮೇಲೆ, ‘ಈ ಚಿತ್ರವು ಸರಿಯಾಗಿ 29 ವರ್ಷ ಹಳೆಯದು, ಛಾಯಾಗ್ರಾಹಕ ಪ್ರಬುದ್ಧ ದಾಸ್‌ಗುಪ್ತಾ ತೆಗೆದಿದ್ದಾರೆ. ಅವರು 18 ವರ್ಷದ ನನ್ನನ್ನು ಸುಂದರವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ನಾನು ಶೂಟ್ ಮಾಡಿದ ಮೊದಲ ವಿಶ್ವ ಸುಂದರಿ ನೀವು ಎಂದು ಅವರು ನನಗೆ ಹೇಳಿದರು, ‘ನನ್ನ ತಾಯ್ನಾಡನ್ನು ಪ್ರತಿನಿಧಿಸಿ ಗೆದ್ದಿರುವುದು ನನಗೆ ಗೌರವವಾಗಿದೆ. ಆ ಕ್ಷಣವನ್ನು ನೆನಸಿಕೊಂಡರೆ ಇಂದಿಗೂ ನನಗೆ ಆನಂದಭಾಷ್ಪ ಬರುತ್ತದೆ. 29 ವರ್ಷಗಳ ನಂತರವೂ ನಾನು ಈ ದಿನವನ್ನು ಬಹಳ ಹೆಮ್ಮೆಯಿಂದ ಆಚರಿಸುತ್ತೇನೆ ಮತ್ತು ನೆನಪಿಸಿಕೊಳ್ಳುತ್ತೇನೆ. ಬ್ಯೂಟಿ ಕ್ವೀನ್ ಸುಶ್ಮಿತಾ ವಿಶ್ವದ 77 ದೇಶಗಳ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಿ, 1994 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಮೊದಲ ವಿಶ್ವ ಸುಂದರಿ ಕಿರೀಟ ಗೆದ್ದ ಭಾರತೀಯ ಮಹಿಳೆ ಎಂದು ಖ್ಯಾತಿ ಪಡೆದರು. ಅದೇ ವರ್ಷದಲ್ಲಿ ಐಶ್ವರ್ಯಾ ರೈ ಬಚ್ಚನ್ ಕೂಡ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ