ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಕ್ರಾಸ್ ದಿಂದ ಶಿರಶ್ಯಾಡ ಗ್ರಾಮದವರೆಗೆ 2023 ನೇ ಸಾಲಿನಲ್ಲಿ ಡಾಂಬರೀಕರಣ ರಸ್ತೆ ಮಂಜೂರಾಗಿದ್ದು, ಪ್ರಸ್ತುತವಾಗಿ ಕಾಮಗಾರಿಯನ್ನು ಗುತ್ತಿಗೆದಾರ ಪ್ರಾರಂಭಮಾಡಿದ್ದು , ಶಿರಶ್ಯಾಡ ಗ್ರಾಮಸ್ಥರು
ಈ ಕಾಮಗಾರಿ ಪರಿಶೀಲಿಸಿದಾಗ ಕಳಪೆ ಮಟ್ಟದ್ದು ಎಂದು ಕಂಡು ಬಂದಾಗ ದಿಢೀರನೆ ಗುತ್ತಿಗೆದಾರನಿಗೆ ವಿಚಾರಿಸಿದಾಗ ಗುತ್ತಿಗೆದಾರನು ಗ್ರಾಮಸ್ಥರಿಗೆ ಸರಿಯಾಗಿ ಸ್ಪಂದಿಸಿರುವುದಿಲ್ಲ. ಕಾರಣ ಗ್ರಾಮಸ್ಥರು ಸಂಬಂಧಿಸಿದ ಎಇಇ ಅವರಿಗೆ ಫೋನ್ ಕರೆ ಮಾಡಿದಾಗ ಸಾವ೯ಜನಿಕರಿಗೆ ಕೆಲವು ಗಂಟೆಗಳ ಕಾಲ ಸತಾಯಿಸಿದ ಘಟನೆಯೊಂದು ನಾದ ಕೆಡಿ ಕೆ.ಇ.ಬಿ ಹತ್ತಿರ ನಡೆದಿದೆ.ಕೊನೆಗೆ ರಸ್ತೆ ಎಸ್ಟೀಮೇಂಟ್ ಪ್ರಕಾರ ಕಾಮಗಾರಿ ನಡೆಯುವ ವರೆಗೂ ನಾವು ಸ್ಥಳದಿಂದ ಹೋಗುವುದಿಲ್ಲ ಎಂದು ಸಾವ೯ಜನಿಕರ ಆರೋಪಿಸಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ ಪಾಸೋಡಿ.ರಾಘವೇಂದ್ರ ಬಿಲ್ಲಾಡ.ಪುಂಡಲಿಕ ತಡ್ಲಿಗಿ.ರಾಘವೇಂದ್ರ ತಡ್ಲಿಗಿ.ವಿನೋದರ ಬಿರಾದಾರ.ದಾದು ಕೋಣಸಿರಸಗಿ .ಉಮೇಶ್ ಮುಳುಜಿ.ರಾಘವೇಂದ್ರ ದೇವರಮನಿ .ಇತರರು ಭಾಗವಹಿಸಿದ್ದರು
Laxmi News 24×7