Breaking News

ಬಿಜೆಪಿ ನಾಯಕರು ದೇಶದ್ರೋಹಿಗಳು: ಸೇವ್ ಮಹದಾಯಿ ಸೇವ್ ಗೋವಾ ಸಮಿತಿ

Spread the love

ಣಜಿ: ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸುತ್ತಿರುವ ಬಿಜೆಪಿ ನಾಯಕರು ದೇಶದ್ರೋಹಿಗಳಾಗಿದ್ದು, ಕರ್ನಾಟಕಕ್ಕೆ ತೆರಳಿ ಚುನಾವಣಾ ಪ್ರಚಾರ ಮಾಡುತ್ತಿರುವವರನ್ನು ಖಂಡಿಸುತ್ತೇವೆ ಎಂದು ಸೇವ್ ಮಹದಾಯಿ ಸೇವ್ ಗೋವಾ ಸಮಿತಿಯ ಪ್ರಶಾಂತ್ ನಾಯ್ಕ್ ಕಿಡಿ ಕಾರಿದ್ದಾರೆ.

 

ಮಡಗಾಂವ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಇವೆಲ್ಲದರ ಸಂಚು ರೂಪಿಸಿದ್ದು, ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರುಸಾಥೀದಾರರಾಗಿದ್ದಾರೆ. ಮಹದಾಯಿ ಮಾರಾಟ ಮಾಡಲು ಮುಂದಾಗಿರುವವರು ತಮ್ಮ ಘನತೆಯ ಜತೆಗೆ ಗೋವಾವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ.ಗೋವಾದ ಭವಿಷ್ಯದ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಗೋಮಾಂತಕದ ಜನತೆ ಈಗಲಾದರೂ ಎಚ್ಚೆತ್ತುಕೊಂಡು ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಪ್ರಶಾಂತ ನಾಯ್ಕ ಹೇಳಿದರು.

ಗೋವಾ ರಾಜ್ಯದ ಜನತೆ ಮಹದಾಯಿ ನದಿಯನ್ನು ಕರ್ನಾಟಕಕ್ಕೆ ಮಾರಾಟ ಮಾಡಿದವರನ್ನು ಕ್ಷಮಿಸಲು ಸಾಧ್ಯವಿಲ್ಲ ಹೀಗಾಗಿ ಜನರು ಇಂತವರಿಗೆ ತಕ್ಕ ಪಾಠ ಕಲಿಸುವವರೆಗೆ ಸುಮ್ಮನಿರುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಘಟನೆಯ ಪ್ರಮುಖರಾದ ಪ್ರತಿಮಾ ಕುಟಿನ್ಹೊ ಮಾತನಾಡಿ, ಗೋವಾವನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವ ಆಟವನ್ನು ಜನರು ಹಲವು ವರ್ಷಗಳ ಹಿಂದೆಯೇ ಆರಂಭಿಸಿದ್ದರು. ಇದೀಗ ಗೋವಾವನ್ನು ಕರ್ನಾಟಕದಲ್ಲಿ ವಿಲೀನಗೊಳಿಸುವ ಹುನ್ನಾರ ನಡೆದಿದೆ. ಅದಕ್ಕೆ ಗೋವಾದ ಜನತೆ ಬಲಿಯಾಗಬಾರದು. ಕದಂಬ ನಿಗಮದ ಅಧ್ಯಕ್ಷರು ಇಲ್ಲಿನ ಜನರ ಬಗ್ಗೆ ಕಾಳಜಿ ವಹಿಸದೇ ಕರ್ನಾಟಕಕ್ಕೆ 140 ಬಸ್ಸುಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಗೆ ಜನರನ್ನು ಕರೆತರಲು ಕಳುಹಿಸುತ್ತಾರೆ ಎಂದು ಕಿಡಿ ಕಾರಿದರು.


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ