Breaking News

ಬುದ್ಧ ಪೂರ್ಣಿಮೆ: ಇತರರ ಕಲ್ಯಾಣಕ್ಕಾಗಿ ಅರ್ಥಪೂರ್ಣ ಜೀವನ ನಡೆಸಿ- ದಲೈ ಲಾಮಾ

Spread the love

ಬೌದ್ಧ ಧರ್ಮದ ಶ್ರೇಷ್ಠ ಧರ್ಮಗುರು ದಲೈ ಲಾಮಾ ಅವರು ಜಗತ್ತಿನಾದ್ಯಂತ ಇರುವ ಬೌದ್ಧ ಅನುಯಾಯಿಗಳಿಗೆ ಬುದ್ಧ ಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ.

ಭಗವಾನ್ ಗೌತಮ ಬುದ್ಧ ಹುಟ್ಟಿದ, ಜ್ಞಾನೋದಯವಾದ ಹಾಗೂ ನಿರ್ವಾಣ ಹೊಂದಿದ ದಿನವನ್ನು ಭಾರತಾದ್ಯಂತ ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ.

ಈ ಶುಭ ಸಂದರ್ಭದಲ್ಲಿ ಬೌದ್ಧ ಧರ್ಮದ ಧರ್ಮಗುರು ದಲೈ ಲಾಮಾ ಅವರು ವಿಶ್ವಾದ್ಯಂತ ಇರುವ ತಮ್ಮ ಅನುಯಾಯಿಗಳಿಗೆ “ಇತರರ ಕಲ್ಯಾಣಕ್ಕಾಗಿ ಅರ್ಥಪೂರ್ಣವಾದ ಜೀವನವನ್ನು ನಡೆಸುವಂತೆ” ಸಂದೇಶ ನೀಡಿದ್ದಾರೆ.

“ಭಗವಾನ್ ಬುದ್ಧನ ಜನ್ಮ, ಜ್ಞಾನೋದಯ ಮತ್ತು ಮಹಾ ಪರಿನಿರ್ವಾಣದ ಈ ಶುಭ ಸ್ಮರಣೆಯ ಸಂದರ್ಭದಲ್ಲಿ ಪ್ರಪಂಚಾದ್ಯಂತ ವಾಸಿಸುತ್ತಿರುವ ಬೌದ್ಧರಿಗೆ ನನ್ನ ಶುಭಾಶಯಗಳು. ನಮ್ಮ ಧರ್ಮ ಗ್ರಂಥಗಳಲ್ಲಿ ಬೋಧಗಯಾ ಎಂದು ಕರೆಯಲ್ಪಡುವ ಬೌದ್ಧ ಯಾತ್ರಾ ಸ್ಥಳ ಅತ್ಯಂತ ಪವಿತ್ರವಾಗಿದೆ. ಈ ಬೋಧಗಯಾವು ಭಾರತದ ಬಿಹಾರ್ ರಾಜ್ಯದ ಗಯಾ ಜಿಲ್ಲೆಯಲ್ಲಿರುವ ಒಂದು ನಗರ. ಇದನ್ನು ಉರುವೇಲ, ಸಂಬೋಧಿ, ವಜ್ರಾಸನ ಮತ್ತು ಮಹಾಬೋಧಿ ಎಂದು ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಬುದ್ಧನು ಜ್ಞಾನೋದಯ (ಮಹಾಬೋಧಿ) ಪಡೆದನು. ಆ ನಂತರ ಅವರು ತಮ್ಮ ನಾಲ್ಕು ಉದಾತ್ತ ಸತ್ಯಗಳು, ಮೂವತ್ತೇಳು ಅಂಶಗಳನ್ನು ಬೋಧಿಸಿದರು. ಜೊತೆಗೆ, ಧ್ಯಾನ ಮಾರ್ಗವು ದುಃಖ ಮತ್ತು ಪಾಪ ಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ ಎಂದು ಇಡೀ ಜಗತ್ತಿಗೆ ತಿಳಿಸಿಕೊಟ್ಟರು” ಎಂದು ಟಿಬೆಟ್‌ನ 14 ನೇ ಧರ್ಮಗುರು ದಲೈ ಲಾಮಾ ಹೇಳಿದರು.

: ಗೌತಮ ಬುದ್ಧನ ಜನ್ಮಸ್ಥಳದ ಬಗ್ಗೆ ಜೈಶಂಕರ್ ಹೇಳಿಕೆ: ವಿವಾದಕ್ಕೆ ತೆರೆ ಎಳೆದ ಭಾರತ

ಬುದ್ಧನ ಬೋಧನೆಯು ಹೃದಯ ಸಹಾನುಭೂತಿ ಮತ್ತು ಬುದ್ಧಿವಂತಿಕೆಯ ಸಂಯೋಜಿತ ಅಭ್ಯಾಸವಾಗಿದೆ. ಅನೇಕ ಬೋಧನೆಗಳು ಪ್ರೀತಿಯ ಮಹತ್ವ ಹಾಗೂ ಜಾಗೃತ ಮನಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತವೆ. ಬುದ್ಧ ಎಂದರೆ ಜ್ಞಾನಿ ಎಂದರ್ಥ. ಬೌದ್ದ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ, ಮಾನವೀಯತೆ ಹಾಗೂ ಶಾಂತಿಯ ಸಂದೇಶ ನೀಡಿ ಏಷ್ಯಾದ ಬೆಳಕು ಎಂದಿದ್ದಾರೆ.

 

ಬುದ್ಧ ಪೂರ್ಣಿಮಾ ಇತಿಹಾಸ: ಇದು ಬುದ್ಧನ ಜನನ, ಜ್ಞಾನೋದಯ ಮತ್ತು ಮರಣವನ್ನು ಸ್ಮರಿಸುವ ಪ್ರಮುಖ ಹಬ್ಬ. ಇದನ್ನು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಬುದ್ಧನ ಬೋಧನೆಗಳಿಂದ ಬೌದ್ಧ ಧರ್ಮ ಮತ್ತು ತತ್ವಶಾಸ್ತ್ರವನ್ನು ಅಭಿವೃದ್ಧಿಪಡಿಸಲಾಯಿತು. ಬ್ರಿಟಾನಿಕಾ ವಿಶ್ವಕೋಶದ ಪ್ರಕಾರ, ಸಂಸ್ಕೃತದಲ್ಲಿ ಬುದ್ಧ ಎಂಬ ಹೆಸರಿನ ಅರ್ಥ ‘ಎಚ್ಚರಗೊಂಡವನು’. ಬುದ್ಧನ ಬೋಧನೆಗಳು ಭಾರತದಿಂದ ಮಧ್ಯ ಮತ್ತು ಆಗ್ನೇಯ ಏಷ್ಯಾ, ಚೀನಾ, ಕೊರಿಯಾ ಮತ್ತು ಜಪಾನ್‌ಗೆ ಹರಡಿತು. ಏಷ್ಯಾದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ತತ್ವಶಾಸ್ತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಚೀನ ಬೌದ್ಧ ಧರ್ಮಗ್ರಂಥ ಮತ್ತು ಸಿದ್ಧಾಂತವು ಪಾಲಿ ಮತ್ತು ಸಂಸ್ಕೃತ ಭಾಷೆಯಲ್ಲಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ