‘ಬೆಳಗಾವಿ: ”ಮಹಾರಾಷ್ಟ್ರ ಏಕೀಕರಣ ಸಮಿತಿ ಸಮಸ್ಯೆಗಳು ಯಾವಗಲೂ ನ್ಯಾಯಾಲಯದಿಂದ ಪ್ರಾರಂಭವಾಗುತ್ತವೆ.
ನಮ್ಮ ಪ್ರಕರಣ ಇದ್ದಿದ್ದರಿಂದ ನಾನು ಕೋರ್ಟ್ಗೆ ಹಾಜರಾಗಿದ್ದೇನೆ” ಎಂದು ಶಿವಸೇನಾ ಸಂಸದ ಸಂಜಯ ರಾವತ್ ಹೇಳಿದರು.
ಇಂದು ಬೆಳಗಾವಿಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಸಮಾಜಕ್ಕಾಗಿ ಹೋರಾಟ ನಡೆಸುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಂಘಟನೆಯ ಸಮಸ್ಯೆಗಳು ಯಾವಾಗಲೂ ನ್ಯಾಯಾಲಯದಲ್ಲಿ ಇರುತ್ತದೆ.
ಅದರ ವಿಚಾರವಾಗಿ ನಾನು ಜಾಮೀನಿಗಾಗಿ ಬಂದಿದ್ದೆ. ವಿಚಾರಣೆ ನಡೆದಿದೆ” ಎಂದರು. ”ಅಲ್ಲದೆ, ಚುನಾವಣೆಯ ಹಿನ್ನೆಲೆಯಲ್ಲಿ ಖಾನಾಪುರ, ದಕ್ಷಿಣ, ಉತ್ತರ ಮತಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದೇನೆ. ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದೇನೆ” ಎಂದ ಅವರು ತಿಳಿಸಿದರು.