ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಮಕ್ಕಳ ಸಿಹಿ ತಿನಿಸು ಇರುವ ಹೆಬ್ಬೆರೆಳು ಗಾತ್ರದ ಗಾಜಿನ ಬಾಟಲಿಯು ಗಂಟಲಲ್ಲಿ ಸಿಲುಕಿಕೊಂಡು ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ 8 ನೇ ವಾರ್ಡಿನ ಮದೀನಾ ಗಲ್ಲಿಯ ಮಹ್ಮದ್ ಅಹ್ಮದ್ ರಬ್ಬಾನಿ ಬಾಗೇವಾಡಿ ಸಾವನ್ನಪ್ಪಿದ ಮಗು ಎಂದು ತಿಳಿದು ಬಂದಿದೆ.
ಬಾಲಕ ಮಹ್ಮದ್ 1 ಅಂಗಡಿಯಲ್ಲಿ ಸಿಹಿ ತಿನಿಸಿದ್ದ ಬಾಟಲಿ ಕೊಂಡುಕೊಂಡಿದ್ದಾನೆ. ಅದರ ಮುಚ್ಚಳವನ್ನು ಬಾಯಿಂದ ತೆಗೆಯಲು ಯತ್ನಿಸಿದ ಸಂದರ್ಭದಲ್ಲಿ ಬಾಟಲಿಯು ಗಂಟಲಿನ ಅನ್ನನಾಳದಲ್ಲಿ ಅಡ್ಡ ಸಿಲುಕಿ ಅಸ್ವಸ್ಥಗೊಂಡಿದ್ದ ಎನ್ನಲಾಗಿದೆ.