Breaking News
Home / ರಾಜಕೀಯ / ಆಟೋದಲ್ಲಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

ಆಟೋದಲ್ಲಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

Spread the love

ವಿಜಯಪುರ: ನಾಗಠಾಣ ಕ್ಷೇತ್ರದ ಅಚ್ಚರಿಯ ಅಭ್ಯರ್ಥಿ, ಪಕ್ಷದ ಸಾಮಾನ್ಯ ಕಾರ್ಯಕರ್ತ ಸಂಜೀವ ಐಹೊಳಿ ಆಟೋದಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

ಗುರುವಾರ ನಾಮಪತ್ರ ಸಲ್ಲಿಕೆಯ ಅಂತಿಮ ದಿನದಂದು ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಜೀವ ಐಹೊಳ್ಳಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಲು ವಾಹನಕ್ಕಾಗಿ ತಡಕಾಡಿದರು.

ತೀರ ಸಾಮಾನ್ಯ ಕಾರ್ಯಕರ್ತನಾದ ಸಂಜೀವನ ಹೆಸರಿನಲ್ಲಿ ಸ್ವಂತ ಕಾರು, ಬೈಕ್ ಸಹ ಇಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಬರಲು ಆಟೋಕ್ಕಾಗಿ ಕಾಯ್ದು ನಿಂತರು. ಬಹಳ ಹೊತ್ತಿನ ಬಳಿಕ ಬಂದ ಆಟೋ ಹತ್ತಿ ಜಿಲ್ಲಾ ಪಂಚಾಯಿತಿ ಆವರಣದ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಆಗಮಿಸಿದ್ದು ಕಾರ್ಯಕರ್ತ ರನ್ನು ಸಹ ಅಚ್ಚರಿಗೀಡು ಮಾಡಿತು.

ಅಭ್ಯರ್ಥಿ ಆಟೋದಲ್ಲಿ ಬಂದಿಳಿಯುವ ನಿರೀಕ್ಷೆ ಇರದ ಕಾರ್ಯಕರ್ತರು ಸಾದಾ ಪ್ಯಾಂಟ್, ಬಿಳಿ ಶರ್ಟ್, ಕಾಲಲ್ಲಿ ಹವಾಯಿ ಚಪ್ಪಲಿ ಧರಿಸಿ ಎದುರುಗಡೆಯೇ ನಿಂತಿದ್ದ ಅಭ್ಯರ್ಥಿಯನ್ನು ಗುರುತಿಸಲು ಕ್ಷಣಕಾಲ ತಡಕಾಡಿದರು. ಬಳಿಕ ಅಭ್ಯರ್ಥಿಯನ್ನು ಗುರುತಿಸಿ ನಗು ನಗುತ್ತಾ ನಾಮ ಪತ್ರ ಸ್ವೀಕಾರ ಕೇಂದ್ರಕ್ಕೆ ಕರೆದೊಯ್ದರು‌.


Spread the love

About Laxminews 24x7

Check Also

ಬುಧವಾರ ಮತ್ತೆ ಎರಡು ಅನಧಿಕೃತ ಆಸ್ಪತ್ರೆ ಸೀಜ್

Spread the loveಚನ್ನಮ್ಮನ ಕಿತ್ತೂರು : ಮಕ್ಕಳ ಮಾರಾಟ ಹಾಗೂ ಭ್ರೂಣ ಹತ್ಯೆ ಪ್ರಕರಣದ ಬೆನ್ನಲೇ ಕಿತ್ತೂರಿನಲ್ಲಿ ಬುಧವಾರ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ