Breaking News

ಏ.21ರ ನಾಳೆ ‘ದ್ವಿತೀಯ PUC ಪರೀಕ್ಷೆ’ ಫಲಿತಾಂಶ ಪ್ರಕಟ

Spread the love

ಬೆಂಗಳೂರು: ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ( PUC Exam 2023 ) ಮುಕ್ತಾಯಗೊಂಡಿದ್ದು, ಇದೀಗ ಉತ್ತರ ಪತ್ರಿಕೆ ಮೌಲ್ಯಮಾಪನ ಕೂಡ ಮುಕ್ತಾಯಗೊಂಡಿದೆ. ಹೀಗಾಗಿ ಏಪ್ರಿಲ್ 21ರ ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ( Karnataka Second PUC Exam Results ) ಪ್ರಕಟಗೊಳ್ಳಲಿದೆ.

 

ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಮಾರ್ಚ್ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 09-03-2023ರಿಂದ 29-03-2023ರವರೆಗೆ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ( 2nd PUC Annual Exam Result ) ಪ್ರಕಟಿಸುವ ಸಂಬಂಧ ದಿನಾಂಕ 21-04-2023ರಂದು ಬೆಳಿಗ್ಗೆ 10ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ. ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ದಿನಾಂಕ 21-04-2023ರಂದು ಬೆಳಿಗ್ಗೆ 11 ಗಂಟೆಯ ನಂತ್ರ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

 


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ