ಬೆಂಗಳೂರು: ‘ಬಿಜೆಪಿ ತ್ಯಜಿಸಿ ಜಗದೀಶ ಶೆಟ್ಟರ್ ಮತ್ತ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದರಿಂದ ವೀರಶೈವ ಲಿಂಗಾಯತರ ಶೇ 2ರಿಂದ 3ರಷ್ಟು ಮತ ಪಕ್ಷಕ್ಕೆ ಬರಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಮ್ಮ ಸಮೀಕ್ಷೆ ಪ್ರಕಾರ ನಾವು 141 ಸೀಟು ಗೆಲ್ಲುತ್ತಿದ್ದೆವು. ಆದರೆ, ಈ ಇಬ್ಬರ ಸೇರ್ಪಡೆಯಿಂದ 150 ಸೀಟು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವ ಬಿಜೆಪಿ, ಜೆಡಿಎಸ್ ನಾಯಕರು, ಕಾರ್ಯಕರ್ತರಿಗೆ ಮುಕ್ತ ಆಹ್ವಾನ ನೀಡುತ್ತೇನೆ. ಚಾಮರಾಜನಗರದಿಂದ ಬೀದರ್‌ವರೆಗೆ ಈ ಇಬ್ಬರ ಬೆಂಬಲಿಗರು, ಅಭಿಮಾನಿಗಳಿದ್ದು, ಎಲ್ಲರೂ ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ’ ಎಂದರು.