ಗಣೇಶಪುರ ಜ್ಯೋತಿ ನಗರ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಂತೆ . ನಚಿಕೇತ ಎಸ್ ಜನಗೌಡ, ಪಿಐ ಕ್ಯಾಂಪ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ಆರೋಪಿತರಾದ
1) ನದೀಮ್ ಅಲ್ಲಾವುದ್ದಿನ್ ನದಾಫ್ (23) ಸಾ: ಜಯನಗರ ಮಚ್ಚೆ ಬೆಳಗಾವಿ, 2) ಮನೀಶ ಮಾರುತಿ ಹುಂದ್ರೆ (23) ಸಾ: ಕಶ್ವರ ನಗರ ಹಿಂಡಲಗಾ ಬೆಳಗಾವಿ.
ಇವರನ್ನು ವಶಕ್ಕೆ ಪಡೆದು, ವಿಚಾರಣಿ ಕೈಕೊಂಡು, ಆರೋಪಿತರಿಂದ ಒಟ್ಟು ರೂ.35,500/- ಮೌಲ್ಯದ 474 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕ್ಯಾಂಪ ಠಾಣೆಯ ಪಿಐ ಹಾಗೂ ಸಿಬ್ಬಂದಿಯವರ ತಂಡದ
ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಮತ್ತು ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ