ಹಾವೇರಿ : ಹಾವೇರಿ ಜಿಲ್ಲೆಯ ರಾಣೇಬೆನ್ನೂರು (Ranebennuru) ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ಅಪ್ರಾಪ್ತೆಯೊರ್ವಳು ಭಾವಿ ಗಂಡನ ಕತ್ತಿಗೆ ಚೂರಿ ಹಾಕಿ ಕೊಲೆ ಮಾಡಲೆತ್ನಿಸಿದ ಘಟನೆ ನಡೆದಿದೆ.
ಮಾರ್ಚ್ 3ರಂದು ಹರಪನಹಳ್ಳಿ (Harapanahalli) ತಾಲೂಕಿನ ಮೂಲದ ದೇವೇಂದ್ರಗೌಡ ಎಂಬಾತನ ಜೊತೆ 17 ವರ್ಷದ ಅಪ್ರಾಪ್ತೆಯ ನಿಶ್ಚಿತಾರ್ಥವಾಗಿತ್ತು. ಆದರೆ ಅಪ್ರಾಪ್ತೆ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಪ್ರೀತಿಸುತ್ತಿದ್ದ ಗೆಳೆಯನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕೊಲೆಗೆ ಅಪ್ರಾಪ್ತೆ ಮುಂದಾಗಿದ್ದಳು ಎಂದು ತಿಳಿದುಬಂದಿದೆ.
ದೇವೇಂದ್ರಗೌಡನನ್ನು ಪಾರ್ಕ್ಗೆ ಕರೆಸಿಕೊಂಡ ಅಪ್ರಾಪ್ತೆ, ನಿನಗೆ ಒಂದು ಗಿಫ್ಟ್ ಕೊಡಬೇಕು, ರೀಲ್ಸ್ ಮಾಡೋಣ ನಿನ್ನ ಕೈ ಕಟ್ಟಿ ಪೋಟೋ ತೆಗೆಯುತ್ತೇನೆ ಎಂದು ಹೇಳಿದ್ದಾಳೆ.
ಇದಕ್ಕಪ್ಪಿದ ದೇವೇಂದ್ರ ಗೌಡ ಸಹ ಕೈ ಕಟ್ಟಿಸಿಕೊಂಡಿದ್ದಾನೆ. ನೋಡು, ಇದೇ ನನ್ನ ಗಿಫ್ಟ್ ಎಂದು ಆತನ ಕತ್ತಿಗೆ ಚೂರಿ ಹಾಕಿದ್ದಾಳೆ.
ಗಂಭೀರವಾಗಿ ಗಾಯಗೊಂಡಿರುವ ದೇವೇಂದ್ರ ಗೌಡನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಆತನ ಪೋಷಕರು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.