Breaking News

ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ  ವಾಲ್ಮೀಕಿ ಮಹರ್ಷಿ ಮೂರ್ತಿ ಆದಷ್ಟು ಬೇಗ ಎರಡು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುವುದು

Spread the love

ಬೆಳಗಾವಿ: ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ  ವಾಲ್ಮೀಕಿ ಮಹರ್ಷಿ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಸತೀಶ್ ಜಾರಕಿಹೊಳಿ ಶನಿವಾರ  ಅಡಿಗಲ್ಲು ಕಾರ್ಯಕ್ರಮವನ್ನು ನೆರವೇಸಿದರು.

ಶಿವಾಜಿ ಪ್ರತಿಮೆ ಸ್ಥಾಪನೆ ವಿವಾದಕ್ಕೆ ಇಡಾಗಿದ್ದ ಮಣಗುತ್ತಿ ಗ್ರಾಮದಲ್ಲಿ,  ಮೂರು ಗ್ರಾಮಗಳ ಗ್ರಾಮಸ್ಥರ ಮುಖಂಡರೊಂದಿಗೆ ಚರ್ಚಿಸಿ, ಒಮ್ಮತ ಅಭಿಪ್ರಾಯದಿಂದ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಸಮಾರಂಭವನ್ನು ನಡೆಯಿತು.

ಇದೇ ವೇಳೆ  ಮಾತನಾಡಿದ ಅವರು, ಗ್ರಾಮದ ಹಿತದೃಷ್ಟಿಯಿಂದ  ಧರ್ಮದಲ್ಲಿ ರಾಜಕೀಯ ಮಾಡುವುದು ಬೇಡ. ಎಲ್ಲರೂ ಗ್ರಾಮದ ಅಭಿವೃದ್ಧಿಗೆ ಶ್ರಮೀಸಬೇಕಾಗಿದೆ. ಇಂದಿನ ಬೆಳವಣಿಗೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಆದಷ್ಟು ಬೇಗ ಎರಡು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಿದರು.

ಎಲ್ಲ ಸಮಾಜದ ಮುಖಂಡರು ಮಹಾನ್ ನಾಯಕರ ತತ್ವ, ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳಡಿಸಿಕೊಳ್ಳಬೇಕು. ಸಮಾಜದ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯವಿದ್ದರು. ಅವುಗಳನ್ನು ಬದಿಗೊತ್ತಿ. ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂದರು. ಮಣಗುತ್ತಿ ಗ್ರಾಮಸ್ಥರು ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಮೇಶ ಪಾಟೀಲ, ಸುರೇಶ ಬೆಣ್ಣಿ, ಸುನೀಲ ಹುಕ್ಕೇರಿ, ಮಾಹನಿಂಗ ಶಿರಗುಪ್ಪಿ, ಅರ್ಜುನ ಗಸ್ತಿ, ಶರತ್ ಪಾಟೀಲ, ರಮೇಶ್ ಜಿಂಜಾರ ಪಾಟೀಲ,ಬಸು ದರನಟ್ಟಿ, ವಿಠ್ಠಲ ವಕ್ಕೂಜಿ, ಕಾಡಪ್ಪ, ಆರ್.ಕೆ.ದೇಸಾಯಿ, ರಾಜು ದರಗಶೆಟ್ಟಿ, ಕಿರಣ ರಜಪೂತ, ಸುನೀಲ ಹುಕ್ಕೇರಿ, ಮಂಜು ಕಾಂಬಳೆ ಸೇರಿದಂತೆ ಇತರರು ಇದ್ದರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ