ಅಥಣಿ: ಇಲ್ಲಿನ ಅಬಕಾರಿ ವಲಯ ವ್ಯಾಪ್ತಿಯ ಮೋಳೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಅಬಕಾರಿ ತಂಡ ಆರೋಪಿಯನ್ನು ಸೋಮವಾರ ಬಂಧಿಸಿದೆ.
ಸುರೇಶ ಅಪ್ಪಾಸಾಬ ಚೋರಮುಲೆ ಬಂಧಿತ. ಈತನಿಂದ 40,612 ರೂ. ಅಂದಾಜು ಮೌಲ್ಯದ 64.44 ಲೀ ಮದ್ಯ ಹಾಗೂ 46.8 ಲೀ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಳಗಾವಿ ಅಬಕಾರಿ ಅಪರ ಆಯುಕ್ತರು, ಬೆಳಗಾವಿ ಉತ್ತರ ಜಿಲ್ಲೆ ಜಂಟಿ ಆಯುಕ್ತರು, ಅಥಣಿ ಉಪವಿಭಾಗದ ಅಬಕಾರಿ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿತ್ತು.
Laxmi News 24×7